Top

ದುರಹಂಕಾರ ಬಿಟ್ಟರೆ ಸಿದ್ದು ಮತ್ತೆ ಸಿಎಂ: ಪೂಜಾರಿ

ಮಂಗಳೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ. ಆದ್ರೆ ಸಿದ್ದರಾಮಯ್ಯಗೆ ದುರಹಂಕಾರ ಜಾಸ್ತಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುತ್ತಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ. ಆದರೆ ಅವರಿಗೆ ದುರಹಂಕಾರ ಜಾಸ್ತಿ. ಇದರಲ್ಲಿ ಎರಡು ಮಾತಿಲ್ಲ. ಇದನ್ನು ನಾನು ಹಿಂದಿನಿಂದ ಹೇಳುತ್ತಾ ಬಂದಿದ್ದೇನೆ. ಜನರಿಗೆ , ಕಾಂಗ್ರೆಸ್ಸಿಗರಿಗೆ ಮರ್ಯಾದೆ ಕೊಡುವುದಿಲ್ಲ. ಅಷ್ಟರಮಟ್ಟಿಗೆ ದುರಹಂಕಾರಿ. ದುರಹಂಕಾರ ಬಿಟ್ಟರೆ ಮಾತ್ರ ಸಿಎಂ ಆಗಿ ಉಳಿಯುತ್ತಾರೆ. ಜನರ ಕೆಲಸ ಮಾಡುವುದರ ಜೊತಗೆ ಮರ್ಯಾದೆ ಕೊಡುವುದನ್ನು ಸಿದ್ದರಾಮಯ್ಯ ಕಲಿಯಬೇಕು ಎಂದು ಹೇಳಿದ್ದಾರೆ.

ಲೋಬೋ ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬಂಟ್ವಾಳದಲ್ಲಿ ರಮಾನಾಥ್ ರೈ ಅತ್ಯಂತ ಹೆಚ್ಚಿನ ಬಹುಮತದೊಂದಿಗೆ ಗೆಲ್ಲುತ್ತಾರೆ.ಬಂಟರಿಗೆ ಕಾಂಗ್ರೆಸ್ ಅತ್ಯುನ್ನತ ಸ್ಥಾನ ಕೊಟ್ಟಿದೆ.ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬರುತ್ತೆ. ವರ್ಷದ ಹಿಂದೆ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಟ್ಟಿದ್ದೆ. ಅವರ ಒಳ್ಳೆಯಕ್ಕೋಸ್ಕರ ಸಲಹೆ ಕೊಡುವುದನ್ನು ಮುಂದುವರಿಸುತ್ತೇನೆ . ಮೋದಿ ಹಾಗೂ ಅಮಿತ್ ಶಾರಿಂದ ಕಾಂಗ್ರೆಸ್ ಮುಗಿಸಲು ಸಾಧ್ಯವಿಲ್ಲ ಎಂದು ಜನಾರ್ಧನ ಪೂಜಾರಿ ಹೇಳಿದ್ದಾರೆ.

Next Story

RELATED STORIES