Top

ಕೊಳ್ಳೆಗಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಬಿರುಸಿನ ಪ್ರಚಾರ

ಚಾಮರಾಜನಗರ : ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್ ಕೃಷ್ಣಮೂರ್ತಿ ಇಂದು ಕೂಡ ಕೊಳ್ಳೆಗಾಲದ ಕ್ಷೇತ್ರದ ಹಲವು ಕಡೆ ಬಿರುಸಿನ ಪ್ರಚಾರ ನಡೆಸಿದ್ರು.

ಎ.ಆರ್ ಕೆ ಕಳೆದ 2004 ರ ಚುನಾವಣೆಯಲ್ಲಿ ಕೇವಲ 1 ಮತದ ಅಂತರದಲ್ಲಿ ಸಂಸದ ಆರ್ ಧ್ರುವನಾರಾಯಣ್ ವಿರುದ್ಧ ಸೋಲನ್ನನುಭವಿಸಿದ್ದರು. ನಂತ್ರ ಸುಮಾರು 14 ವರ್ಷಗಳ ಕಾಲ ವನವಾಸ ಅನುಭವಿಸಿದರು. ಅಲ್ಲಿಂದ ಬೇರೆ ಬೇರೆ ಪಕ್ಷಗಳ ಪಕ್ಷಾಂತರ ಮಾಡಿದ್ದರು. ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಕೊಳ್ಳೆಗಾಲ ವಿದಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಈ ಬಾರಿ ಗೆಲುವಿನ ನಗೆ ಬೀರಲು ಸಜ್ಜಾಗಿದ್ದಾರೆ.

ಈ ಬಾರಿ ಶತಾಯ ಗತಾಯ ಗೆಲ್ಲಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಎ.ಆರ್.ಕೃಷ್ಣಪೂರ್ತಿ ರಾಜಕೀಯ ಭವಿಷ್ಯದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಏಕೆಂದರೆ ಹಾಲಿ ಸಿಟಿಂಗ್ ಎಂ.ಎಲ್.ಎ ಜಯಣ್ಣ ಅವರಿಗೆ ಟಿಕೇಟ್ ನೀಡದೆ ಕೃಷ್ಣಮೂರ್ತಿ ಅವರಿಗೆ ಮಣೆ ಹಾಕಿದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಎಲ್ಲೋ ಒಂದು ಕಡೆ ಸತತ ಸೋಲಿನಿಂದ ಕಂಗೆಟ್ಟಿದ್ದ ಇವರಿಗೆ ಮತದಾರರು ಅನುಕಂಪ ತೋರುಸಿ, ಗೆಲ್ಲಬಹುದೇ ಎಂಬ ಕುತೂಹಲ ಕ್ಷೇತ್ರದಲ್ಲಿದೆ. ಹೀಗಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

Next Story

RELATED STORIES