Top

ಕಿಂಗ್ಸ್ ಎದುರು ರಾಜನಾಗಿ ಮೆರೆದ ರಾಜಸ್ಥಾನ್ ರಾಯಲ್ಸ್

ಜಯಪುರ: ಜೋಸ್ ಬಟ್ಲರ್ ಅವರ ಅರ್ಧ ಶತಕದ ನೆರವಿನಿಂದ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡ ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 15 ರನ್‍ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯನ್ನ ಜೀವಂತವಾಗಿರಿಸಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ಆರಂಭಿಕ ಬ್ಯಾಟ್ಸ್‍ಮನ್ ಜೊಸ್ ಬಟ್ಲರ್ 82 ರನ್‍ಗಳ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು. ಸಂಜು ಸಾಮನ್ಸ್ 22, ಬೆನ್ ಸ್ಟೋಕ್ಸ್ 14, ಸ್ಟುವರ್ಟ್ ಬಿನ್ನಿ 11, ಕೆ.ಗೌತಮ್ 8 ರನ್ ಬಾರಿಸಿದ್ರು. ರಾಜಸ್ಥಾನ ತಂಡ ನಿಗದಿತ ಓವರ್‍ನಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಪರ ಆಂಡ್ರಿವ್ ಟೈ 4 ವಿಕೆಟ್ ಪಡೆದು ಮಿಂಚಿದ್ರು. ಬೃಹತ್ ಮೊತ್ತ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕನ್ನಡಿಗ ಕೆ. ಗೌತಮ್ ಆರಂಭಿಕ ಆಘಾತ ನೀಡಿದ್ರು. ನಂತರ ಬಂದ ಬ್ಯಾಟ್ಸ್ ಮನ್‍ಗಳು ಒಂದಂಕಿ ರನ್ ಬಾರಿಸಿ ಬೇಗನೆ ಪೆವಲಿಯನ್ ಸೇರಿದ್ರು. ಏಕಾಂಗಿ ಹೋರಾಟ ನಡೆಸಿದ ಕೆ.ಎಲ್.ರಾಹುಲ್ ಅಜೇಯ 95 ರನ್ ಬಾರಿಸಿದ್ರು. ಪಂಜಾಬ್ ನಿಗದಿತ ಓವರ್‍ನಲ್ಲಿ 7 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಕೆ.ಗೌತಮ್ 2 ವಿಕೆಟ್ ಪಡೆದು ಮಿಂಚಿದ್ರು.

Next Story

RELATED STORIES