ಐಪಿಎಲ್ ನಾಕೌಟ್, ಫೈನಲ್ 7 ಗಂಟೆಗೆ ಶುರು
TV5 Kannada9 May 2018 10:31 AM GMT
ಅಭಿಮಾನಿಗಳ ಹಿತದೃಷ್ಟಿಯಿಂದ ಐಪಿಎಲ್ ಟಿ-20 ಟೂರ್ನಿಯ ನಾಕೌಟ್ ಹಾಗೂ ಫೈನಲ್ ಪಂದ್ಯವನ್ನು 7 ಗಂಟೆಗೆ ಆರಂಭಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ನಿಧಾನಗತಿ ಬೌಲಿಂಗ್ ಹಾಗೂ ಇನ್ನಿತರೆ ಕಾರಣಗಳಿಂದ ಪಂದ್ಯ ಮುಗಿಯುವುದು 12 ಗಂಟೆ ಆಗುತ್ತಿರುವುದರಿಂದ ಅಭಿಮಾನಿಗಳು ಮನೆಗೆ ಮರಳುವುದು ತಡವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳನ್ನು ಸಾಮಾನ್ಯವಾಗಿ 8 ಗಂಟೆಗೆ ಆರಂಭವಾಗುತ್ತಿದ್ದ ಪಂದ್ಯವನ್ನು ಒಂದು ಗಂಟೆ ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲ ತಿಳಿಸಿದ್ದಾರೆ.
Next Story