Top

ಉದ್ಯೋಗ ಕೊಡಿ ಅಂದ್ರೆ, ಪಕೋಡಾ, ಟೀ ಮಾರಿ ಅಂತಾರೆ: ಮೋದಿಗೆ ಸಿದ್ದು ತಿರುಗೇಟು

ಉದ್ಯೋಗ ಕೇಳಿದ್ರೆ ಪಕೋಡ ಮಾರಿ ಅಂತಾರೆ. ಟಿ ಮಾರಿ ಅಂತಾರೆ ಆ ಉದ್ಯೋಗಗಳು ಕನಿಷ್ಠ ಅಂತ ಹೇಳೋಲ್ಲ. ಆದರೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿನಿ ಅಂತ ಹೇಳಿ. ಈ ಟೀ ಮಾರಿ ,ಪಕೋಡ ಮಾರಿ ಅಂತಾರೆ. ಇದೇನಾ ಇವರ ಉದ್ಯೋಗ ಸೃಷ್ಠಿ? ಎಂದು ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರಿನ ಚಾಮರಾಜ ಕ್ಷೇತ್ರದ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಕಾರ್ಯಕರ್ತರು ಏನನ್ನು ಮಾಡಬೇಕಿಲ್ಲ. ಒಂದು ಹ್ಯಾಂಡ್‌ಬಿಲ್ ಹಿಡಿದು ಮನೆ ಬಾಗಿಲಿಗೆ ಹೋಗಿ ನಮ್ಮ ಕೆಲಸ ಹೇಳಲಿ ಸಾಕು. ಜನ ನಮಗೆ ಮತ್ತೊಮ್ಮೆ ಆರ್ಶಿವಾದ ಮಾಡಿ ಅಂತ ಕೇಳಿ ಸಾಕು. ಜನ ಅನ್ನ ಕೊಟ್ಟವರನ್ನ, ನೀರು ಕೊಟ್ಟವರನ್ನ, ವಸತಿ ಕೊಟ್ಟವರನ್ನ ಎಂದಿಗೂ ಕೈ ಬಿಡೋಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವ್ಯಾಟ್ಸಪ್ ಮತ್ತು ಫೇಸ್​ಬುಕ್​ಗಳಲ್ಲಿ ಫೇಕ್ ಪೋಟೋ ಹಬ್ಬಿಸುತ್ತಿದ್ದಾರೆ. ಆ ಎಸ್‌ಡಿಪಿಐ ಅಭ್ಯರ್ಥಿ ನನಗೆ ಗೊತ್ತೇ ಇಲ್ಲ ಅವನ ಜೊತೆ ನನ್ನ ಪೋಟೋ ಹಾಕಿದ್ದಾರೆ. ಅಮೀತ್ ಷಾ ಜೊತೆ ಕುಳಿತು ಮಾತನಾಡುತ್ತಿರುವ ಪೋಟೋ ಹಾಕಿದ್ದಾರೆ. ಇದನ್ನೆಲ್ಲ ಆ ಬಿಜೆಪಿಯವರು ಅಪಪ್ರಚಾರ ಮಾಡ್ತಿದ್ದಾರೆ. ಯಾವುದನ್ನ ನಂಬಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.

Next Story

RELATED STORIES