Top

ಅಭ್ಯರ್ಥಿಗಳ ವಿರುದ್ಧ ಮಾಠ ಮಂತ್ರಕ್ಕೆ ಮೊರೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಭಾವ ಹಾಗೂ ಬಾಗಲಕೋಟೆ ಜಿಲ್ಲೆಯ ತೇರದಾಳ ಕಾಂಗ್ರೆಸ್ ಅಭ್ಯರ್ಥಿ ಉಮಾಶ್ರೀ ವಿರುದ್ಧ ಅಪರಿಚಿತರು ಮಾಠ ಮಂತ್ರ ಮಾಡಿಸಿದ್ದು ಬೆಳಕಿಗೆ ಬಂದಿದೆ.

ಇಂದು ರಾಘವಾಪುರ ಗ್ರಾಮಕ್ಕೆ ಮತಯಾಚನೆಗೆ ಆಗಮಿಸುತ್ತಿದ್ದ ನಿರಂಜನ್ ಕುಮಾರ್ ಅವರ ಭಾವ ಚಿತ್ರ ಇಟ್ಟು ಅದರ ಮೇಲೆ ಮಾಠ ಮಂತ್ರ ಮಾಡಿಸಿದ್ದ ನಿಂಬೆ ಹಣ್ಣು ಮುಂತಾದವು ಕಂಡುಬಂದವು. ರಾಘವಾಪುರ ಕಾಂಗ್ರೆಸ್ ಕಾರ್ಯಕರ್ತರು ಮಾಡಿರುವ ಶಂಕೆ ಇದೆ. ಘಟನಾ ಸ್ಥಳಕ್ಕೆ ಪ್ಲೇಯಿಂಗ್ ಸ್ಕ್ವಾಡ್ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿತು.

ಇದೇ ವೇಳೆ ಉಮಾಶ್ರೀ ಸ್ಫಧಿ೯ಸಿದ ತೇರದಾಳ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಮತಗಟ್ಟೆ ಬಳಿ ವಾಮಾಚಾರ ಮಾಡಿಸಿದ್ದು ಬೆಳಕಿಗೆ ಬಂದಿದೆ.

ನಿಂಬೆ ಹಣ್ಣು, ತೆಂಗಿನಕಾಯಿ, ಅಕ್ಕಿ, ತಾಮ್ರದ ಹಾಳೆ, ಪ್ರಸಾದ, ಸೂಜಿ ದಾರಾ ಜೊತೆಗೆ ಉಮಾಶ್ರೀ ಮತ್ತು ಮಗನ ಹೆಸರು ಬರೆದು ಚೀಟಿ ಬರೆದು ವಾಮಾಚಾರದಲ್ಲಿ ಬಳಕೆ ಮಾಡಲಾಗಿದೆ. ಗ್ರಾಮದ ಲಕ್ಕಪ್ಪ, ಬಸಪ್ಪ ಎಂಬುವವರಿಂದ ವಾಮಾಚಾರ ಮಾಡಿರೋ ಆರೋಪ ಇದ್ದು, ಜಮಖಂಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

Next Story

RELATED STORIES