Top

ಅನಂತ್, ಜಾವ್ಡೇಕರ್ ವಿರುದ್ಧ ಸುರ್ಜಿವಾಲ್ ಕಿಡಿ

ಬೆಂಗಳೂರು : ಜಾಲಹಳ್ಳಿಯಲ್ಲಿ ಸಿಕ್ಕ ಅಸಲಿ ಓಟರ್ ಐಡಿ ಪ್ರಕರಣದ ರೂವಾರಿಗಳು ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಪ್ರಕಾಶ್ ಜಾವ್ಡೇಕರ್ ಅಂತ ಎಐಸಿಸಿ ಕಮ್ಯೂನಿಕೇಷನ್ ಸೆಲ್ ನ ಮುಖ್ಯಸ್ಥರ ರಣದೀಪ್ ಸುರ್ಜಿವಾಲ್ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವ್ರು, ಬಿಜೆಪಿ ಅವ್ರು ಮಿಡ್ ನೈಟ್ ಡ್ರಾಮಾ ಮಾಡಿದ್ದಾರೆ. ಈ ಓಟರ್ ಐಡಿಯನ್ನ ಬಿಜೆಪಿ ಅವ್ರೇ ಮಾಡಿಸಿದ್ದಾರೆ. ಇದಕ್ಕೆ ಕಾರಣ ಕೇಂದ್ರ ಮಂತ್ರಿಗಳಾದ ಅನಂತ್ ಕುಮಾರ್ ಹಾಗೂ ಪ್ರಕಾಶ ಜಾವ್ಡೇಕರ್ ಅಂತ ನೇರ ಆರೋಪ ಮಾಡಿದ್ರು. ತಮ್ಮ ಅಭ್ಯರ್ಥಿ ಗೆಲ್ಲಬೇಕು ಅಂತ ಇಂತ ಕೃತ್ಯ ಬಿಜೆಪಿ ಅವ್ರು ಮಾಡಿದ್ದಾರೆ. ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ ಅಂತ ಕಿಡಿ ಕಾರಿದ್ರು.

ಓಟರ್ ಐಡಿ ಸಿಕ್ಕಿರೋ ಅಪಾರ್ಟ್ಮೆಂಟ್ ಬಿಜೆಪಿ ಕಾರ್ಯಕರ್ತೆ ಮಂಜಳ ಅವ್ರಿಗೆ ಸೇರಿದ್ದು,ಅಲ್ಲದೆ ಅದನ್ನ ಬಿಜೆಪಿ ಕಾರ್ಪೋರೇಟರ್ ಎಲೆಕ್ಷನ್ ಗೆ ನಿಂತಿದ್ದ ರಾಕೇಶ್ ಅನ್ನೋರಿಗೆ ಸೇರಿದ್ದು. ಇಷ್ಟಾದ್ರು ಬಿಜೆಪಿ ಅವ್ರು ಸುಳ್ಳು ಹೇಳಿ ಕಾಂಗ್ರೆಸ್ ಮೇಲೆ ಆರೋಪ ಮಾಡ್ತಿದ್ದಾರೆ. ಚುನಾವಣೆ ಆಯುಕ್ತರು ಈ ಅಪಾರ್ಟ್ಮೆಂಟ್ ಮಂಜುಳಾ ಆವ್ರಿಗೆ ಸೇರಿದ್ದು ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಮಂಜುಳ ಅವ್ರು ಈಗಲೂ ಬಿಜೆಪಿ ಪರವಾಗಿ ಪ್ರಚಾರ ಮಾಡ್ತಿದ್ದಾರೆ ಅಂತ ಆರೋಪಿಸಿದ್ರು.

ಮಾಜಿ ಡಿಸಿಎಂ ಆಶೋಕ್ ಸೇರಿದಂತೆ ಅನೇಕರ ಜೊತೆ ಇವ್ರು ಫೋಟೋ ತೆಗೆಸಿಕೊಂಡಿದ್ದಾರೆ. ಇಷ್ಟಿದ್ರು ಜಾವ್ಡೇಕರ್ ಸುಮ್ಮನೆ ಆರೋಪ ಮಾಡ್ತಿದ್ದಾರೆ ಅಂತ ಕಿಡಿಕಾರಿದ್ರು. ಈ ಬಗ್ಗೆ ಮೋದಿ ಕೂಡಾ ಪ್ರಚಾರದಲ್ಲಿ ಮಾತಾಡ್ತಾರೆ. ಇದು ಇವರದ್ದೇ ಪ್ಲಾನ್. ಕೂಡಲೇ ಮೋದಿ ರಾಜ್ಯದ ಜನತೆಯ ಕ್ಷೇಮ ಕೇಳಬೇಕು ಅಂತ ಆಗ್ರಹ ಮಾಡಿದ್ರು. ಬಿಜೆಪಿ ನಾಯಕರೇ ಈ ಓಟರ್ ಐಡಿ ಮಾಡಿದ್ದು, ಚುನಾವಣೆ ಆಯೋಗ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹ ಮಾಡಿದ್ರು.

ಇನ್ನು ಐಟಿ ಇಲಾಖೆ ಮೋದಿ ಕೈಗೊಂಬೆಯಾಗಿ ಕೆಲಸ ಮಾಡ್ತಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಟಾರ್ಗೆಟ್ ಮಾಡಿ ದಾಳಿ ಮಾಡಲಾಗ್ತಿದೆ. ಭ್ರಷ್ಟಾಚಾರ ಆರೋಪ ಹೊತ್ತ ಯಡಿಯೂರಪ್ಪ ಮೇಲೆ ಐಟಿ ದಾಳಿ ಮಾಡಿಲ್ಲ. ಬಿಜೆಪಿ ನಾಯಕರ ಮನೆ ಮೇಲೆ ಐಟಿ ದಾಳಿ ಮಾಡ್ತಿಲ್ಲ. 70 ವರ್ಷ ಇತಿಹಾಸದಲ್ಲೆ ಇಂತಹ ಘಟನೆ ನಡೆದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ಅಮಿತ್ ಶಾ ಅವ್ರಿಗೆ ಸುಳ್ಳು ಹೇಳೋದೆ ಕೆಲಸ ಬಿಜೆಪಿ ಅವ್ರಿಗೆ ಸುಳ್ಳು ಹೇಳೋದು ಡಿಎನ್ ಎನಲ್ಲಿ ಬಂದಿದೆ ಅಂತ ಕಿಡಿಕಾರಿದ್ರು. ಓಟರ್ ಐಡಿ ಪ್ರಕರಣದಲ್ಲಿ ಕೇಂದ್ರ ಚುನಾವಣೆ ಆಯೋಗಕ್ಕೂ ದೂರು ನೀಡಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಅಂತ ಒತ್ತಾಯಿಸಿದ್ರು.

Next Story

RELATED STORIES