Top

25 ಕೊಠಡಿಗಳ ಬಂಗಲೆಯ ಬಾಡಿಗೆ 4212 ರೂ. ಮಾತ್ರ!

ಉತ್ತರ ಪ್ರದೇಶದಲ್ಲಿ 25 ಕೊಠಡಿಗಳ ಬೃಹತ್​ ಬಂಗಲೆಯ ಮಾಸಿಕ ಬಾಡಿಗೆ ಮೊತ್ತ ಕೇವಲ 4212 ರೂ. ಮಾತ್ರ! ಇಷ್ಟು ಕಡಿಮೆ ಬೆಲೆಗೆ ಹಳ್ಳಿಯಲ್ಲೂ ಮನೆ ಸಿಗೋದಿಲ್ಲ. ಆದರೆ ನಿಮಗೆ ಇಷ್ಟು ಕಡಿಮೆ ಬೆಲೆಗೆ ಇಂತಹ ಅದ್ಭುತ ಬಂಗಲೆಯನ್ನು ಬಾಡಿಗೆಗೆ ಪಡೆಯಬೇಕಾದರೆ ಹಣ ಮಾತ್ರವಲ್ಲ ಜೊತೆಗೆ ನೀವು ಮಾಜಿ ಮುಖ್ಯಮಂತ್ರಿಯೂ ಆಗಿರಬೇಕು!

ಹೌದು, ಉತ್ತರ ಪ್ರದೇಶದಲ್ಲಿ ಸರಕಾರ ಮಾಜಿ ಮುಖ್ಯಮಂತ್ರಿಗಳಿಗೆ ಜೀವಿತಾವಧಿ ವರೆಗೂ ಇರಲು ಬಂಗಲೆ ನೀಡಲು ರೂಪಿಸಿದ್ದ ಕಾನೂನನ್ನು ನ್ಯಾಯಾಲಯ ರದ್ದುಗೊಳಿಸಿತ್ತು. ಇದರಿಂದ ಐವರು ಮಾಜಿ ಮುಖ್ಯಮಂತ್ರಿಗಳಿಗಾಗಿ ನಿರ್ಮಿಸಲಾಗಿದ್ದ ಬಂಗಲೆಯನ್ನು ಸೋಮವಾರ ತೆರವುಗೊಳಿಸಬೇಕಾಗಿತ್ತು. ಆದರೆ ಇದೀಗ ಈ ಬಂಗಲೆಯನ್ನು ಬಾಡಿಗೆಗೆ ನೀಡಲು ಉತ್ತರ ಪ್ರದೇಶ ಚಿಂತನೆ ನಡೆಸಿದೆ.

ಲಕ್ನೋದ ವಿಕ್ರಮಾದಿತ್ಯ ಮಾರ್ಗದಲ್ಲಿ 3200 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಈ ಬಂಗಲೆಯನ್ನು 25 ಕೊಠಡಿಗಳಿವೆ. ಇದರ ಮಾಸಿಕ ಬಾಡಿಗೆ 4212 ರೂ. ನಿಗದಿಪಡಿಸಲಾಗಿದೆ. ಲ್ಕನೋದಲ್ಲಿ ಕನಿಷ್ಠ ಬಾಡಿಗೆ ನಡೆಯುತ್ತಿರುವುದು 6000ದಿಂದ 7000 ರೂ. ಆದಕ್ಕಿಂತಲೂ ಕಡಿಮೆ ಬಾಡಿಗೆ ನಿಗದಿಪಡಿಸಲಾಗಿದೆ.

Next Story

RELATED STORIES