Top

2019ರಲ್ಲಿ ನಾವೇ ಅಧಿಕಾರಕ್ಕೆ: ಪ್ರಧಾನಿ ಕನಸು ಬಿಚ್ಚಿಟ್ಟ ರಾಹುಲ್​

2019ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಪ್ರಧಾನಿಯ ಕನಸನ್ನು ಹೊರಹಾಕಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 4 ವರ್ಷಗಳ ಆಡಳಿತದಲ್ಲಿ ಏನೂ ಸಾಧನೆ ಮಾಡದ ಮೋದಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಮೋದಿ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕಕ್ಕೆ ಏನು ಮಾಡಿದ್ದಾರೆ? ಎಚ್​ಎಎಲ್​ಗೆ ದೊರೆಯಬೇಕಿದ್ದ ಟೆಂಡರ್​ ಅನ್ನು ರಿಲಾಯನ್ಸ್ ಸಂಸ್ಥೆಗೆ ಕೊಟ್ಟಿದ್ದಾರೆ. ಅಲ್ಲದೇ ಉದ್ಯೋಗ ಅವಕಾಶ ಕಲ್ಪಿಸುವ ತಮ್ಮ ಭರವಸೆಯನ್ನೂ ಈಡೇರಿಸಿಲ್ಲ ಎಂದು ರಾಹುಲ್ ಆರೋಪಿಸಿದರು.

ಅಮಿತ್ ಶಾ ಕೊಲೆ ಆರೋಪಿ. ಜೈಲಿಗೆ ಹೋಗಿ ಬಂದವರು. ಅವರಿಗೆ ನಮ್ಮ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ ಎಂದು ರಾಹುಲ್ ಛೇಡಿಸಿದರು.

Next Story

RELATED STORIES