Top

ಸಿದ್ದರಾಮಯ್ಯ ಸರ್ಕಾರ ತೊಲಗಿಸಿ ಬಿಜೆಪಿ ಸರ್ಕಾರ ಆಡಳಿತಕ್ಕೆ ತನ್ನಿ : ಉತ್ತರಪ್ರದೇಶ ಸಿಎಂ ಯೋಗಿ ಕರೆ

ಕಾರವಾರ : ಕರ್ನಾಟಕದ ಸುರಕ್ಷತೆಗಾಗಿ ಸಿದ್ದರಾಮಯ್ಯನವರ ಸರ್ಕಾರ ತೊಲಗಿಸಿ ಬಿಜೆಪಿ ಸರ್ಕಾರವನ್ನ ಆಡಳಿತಕ್ಕೆ ತನ್ನಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರಡೇಶ್ವರದಲ್ಲಿ ಆಯೋಜನೆ ಮಾಡಿದ್ದ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋದಿ ಸರ್ಕಾರ ಎಂದು ಕಿಡಿಕಾರಿದ್ದಾರೆ. ಜಿಹಾದಿಗಳಿಗೆ ಬೆಂಬಲಿಸುವ ಸರ್ಕಾರ ಸಿದ್ದರಾಮಯ್ಯ ಸರ್ಕಾರ, ಕರ್ನಾಟಕದ ಅಭಿವೃದ್ದಿಗೆ, ಇಲ್ಲಿನ ಜನರ ಸುರಕ್ಷತೆಗಾಗಿ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನ ಆಡಳಿತಕ್ಕೆ ತನ್ನಿ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ರಾಜ್ಯದಲ್ಲಿ ಮಹಾಪುರುಷ ಶಿವಾಜಿ ಜಯಂತಿಯನ್ನ ಮಾಡುವ ಬದಲು ಟಿಪ್ಪು ಜಯಂತಿಯನ್ನ ಸಿದ್ದರಾಮಯ್ಯ ಸರ್ಕಾರ ಮಾಡುವ ಮೂಲಕ ಶಿವಾಜಿ ಹಾಗೂ ಹಿಂದೂಗಳಿಗೆ ಅಗೌರವ ತೋರಿಸಿದೆ. ಕೃಷಿಕರ ವಿರೋದಿ ಸಿದ್ದರಾಮಯ್ಯ ಸರ್ಕಾರ. ರೈತರ ಆತ್ಮಹತ್ಯೆ ತಡೆಯಲು ಸಾಧ್ಯವಾಗಿಲ್ಲ, ಉತ್ತರ ಪ್ರದೇಶದಂತಹ ಸರ್ಕಾರವೇ ರೈತರ ಸಾಲಮನ್ನಾ ಮಾಡಿದೆ. ಕರ್ನಾಟಕದ ಸರ್ಕಾರ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಇದೇ ವೇಳೆ ಯೋಗಿ ಆದಿತ್ಯನಾಥ್ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ. ರೈತರ ಬೆಳವಣಿಗೆಗೆ ರಾಜ್ಯ ಅಭಿವೃದ್ದಿ ಸಹಕರಿಸಿ ಎಂದು ನೀಡಿದರು.

Next Story

RELATED STORIES