Top

ಸಿಎಂ ವಾಸ್ತವ್ಯ ಹೂಡಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ

ಚುನಾವಣೆಗೂ ಮುನ್ನ ಕಾಂಗ್ರೆಸ್ ಗೆ ಐಟಿ ಇಲಾಖೆ ಬಿಗ್ ಶಾಕ್ ನೀಡಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಕಾಂಗ್ರೆಸ್ ನಾಯಕನ ಒಡೆತನದ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಈ ರೆಸಾರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದರು. ನಿನ್ನೆ ತಡರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು,ದಾಳಿ ವೇಳೆ ಸಿಎಂ ಸಿದ್ದರಾಮಯ್ಯ ಆಪ್ತ ರೆಸಾರ್ಟ್ ನಲ್ಲಿದ್ದರು ಎನ್ನಲಾಗಿದೆ.

ಇನ್ನು ಈ ರೆಸಾರ್ಟ್ ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಗೆ ಸೇರಿದ್ದ ರೆಸಾರ್ಟ್ ಆಗಿದ್ದು, ಐಟಿ ದಾಳಿಯಿಂದ ಕಾಂಗ್ರೆಸ್ ಪಕ್ಷದಲ್ಲಿ ತಳಮಳ ಶುರುವಾಗಿದೆ. ಬಾದಾಮಿಯ ಹೊರವಲಯದಲ್ಲಿರುವ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ದಾಳಿ ನಡೆದಿದ್ದು, ದಾಳಿ ವೇಳೆ ಸಿದ್ದರಾಮಯ್ಯ ಆಪ್ತ ಸಿ.ಎಂ.ಇಬ್ರಾಹಿಂ ರೆಸಾರ್ಟ್ ನಲ್ಲಿದ್ದರು. ರಾತ್ರಿ 2ಗಂಟೆ ಸಮಯದಲ್ಲಿ ಇಬ್ರಾಹಿಂ ಅವರನ್ನು ಹೊರಕಳುಹಿಸಲಾಗಿದೆ. ಇನ್ನು ಸತತ9 ಗಂಟೆಗಳ ಕಾಲ ತೀವ್ರ ಶೋಧ ನಡೆಸಿದ ಅಧಿಕಾರಿಗಳು, ಅಂದಾಜು 13ಲಕ್ಷ ಜಪ್ತಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಎಂ.ಇಬ್ರಾಹಿಂ, ನಾನು ಈ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರಲಿಲ್ಲ, ಊಟಕ್ಕೆಂದು ಈ ರೆಸಾರ್ಟ್ ಗೆ ಬಂದಿದ್ದೆ. ನಾನು ಎಸ್ ಆರ್ ಪಾಟೀಲ್ ಇಬ್ಬರು ಊಟಕ್ಕೆಂದು ಬಂದಿದ್ವಿ. ಈ ವೇಳೆ ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರು. ನನ್ನನ್ನು ಏನೂ ಪ್ರಶ್ನೆ ಮಾಡಿರಲಿಲ್ಲ. 2ಗಂಟೆ ಬಳಿತ ಹೊರಹೋಗಲು ಹೇಳಿದ್ರು, ಹೊರಟಿದ್ದೇನೆ ಎಂದು ಹೇಳಿದ್ದಾರೆ.

Next Story

RELATED STORIES