Top

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೋನಂ ಕಪೂರ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೋನಂ ಕಪೂರ್
X

ಸಾವರಿಯಾ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ​ ನಟಿ ಸೋನಂ ಕಪೂರ್ ಇದೀಗ ತಮ್ಮ ಜೀವನದ ಸೆಕೆಂಡ್​ ಇನ್ನಿಂಗ್ಸ್​ ಶುರು ಮಾಡಿದ್ಧಾರೆ.. ತಮ್ಮ ಬಹುದಿನದ ಗೆಳೆಯ ಆನಂದ್​ ಅಹುಜಾ ಅವರನ್ನ ಇಂದು ಮದ್ಯಹ್ನ 11ಗಂಟೆಯ ಮುಹೂರ್ತದಲ್ಲಿ ಸೋನಮ್​ ಕಪೂರ್​ ವಿವಾಹವಾಗಿದ್ದಾರೆ.

ಬಳಿಕ ರಾತ್ರಿ 8ರ ವೇಳೆಗೆ ಗಣ್ಯರಿಗೆ ಮುಂಬೈನ ‘ದಿ ಲೀಲಾ’ದಲ್ಲಿ ಭರ್ಜರಿ ಪಾರ್ಟಿ ಆಯೋಜಿಸಲಾಗಿದೆ.. ಈಗಾಗಲೇ ಕಪೂರ್​ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು ಕಳೆದ ಒಂದು ವಾರದಿಂದ ಮದುವೆ ಕಾರ್ಯಗಳು ನಡೀದಿದೆ.. ಅಂದಹಾಗೆ ಮೊನ್ನೆಯಷ್ಟೆ ಸಂಗೀತ್​ ಹಾಗು ಮೆಹೆಂದಿ ಕಾರ್ಯಕ್ರಮ ನಡೆದಿದ್ದು.. ನಿನ್ನೆ ಪಂಜಾಬಿ ಸಂಪ್ರದಾಯದಂತೆ ಸೋನಮ್​ ಕಪೂರ್​ಗೆ ಚೂಡಾ ಹಾಕುವ ಕಾರ್ಯ ನಡೆದಿತ್ತು.. ಇನ್ನು ಕಪೂರ್​ ಫ್ಯಾಮಿಲಿಯ ಮದುವೆ ಕಾರ್ಯಗಳಲ್ಲಿ ಬಾಲಿವುಡ್​ನ ಹಲವಾರು ಗಣ್ಯರು ಭಾಗಿಯಾಗಿದ್ದರು..

Next Story

RELATED STORIES