Top

ವಿಜಯನಗರ, ಗೋವಿಂದರಾಜನಗರದಲ್ಲಿ ರಂಗೇರಿದ ಚುನಾವಣಾ ಪ್ರಚಾರ

ಬೆಂಗಳೂರು : ವಿಧಾನ ಸಭಾ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇನ್ನೇನು ಒಂದೇ ದಿನಾ ಬಾಕಿ ಇದೆ. ಈ ಸಂದರ್ಭದಲ್ಲಿ, ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಮಿಂಚಿನ ಮತ ಪ್ರಚಾರಕ್ಕೆ ತೊಡಗಿದ್ದಾರೆ. ಇತ್ತ ವಿಜಯ ನಗರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಎಂ ಕೃಷ್ಣಪ್ಪ, ಗೋವಿಂದರಾಜ ವಿಧಾನಸಭಾ ಕ್ಷೇತ್ರದ ಪ್ರಿಯಾಕೃಷ್ಣಾ ಭರ್ಜರಿ ಮತ ಪ್ರಚಾರ ನಡೆಸಿದರು.

ಎಂ ಕೃಷ್ಣಪ್ಪ, ತಮ್ಮ ಕ್ಷೇತ್ರದ ಹಂಪಿ ನಗರದಕ್ಕೆ ತಲುಪಿ ಅವ್ರು ಆರ್​ ಪಿಸಿ ಲೇಔಟ್ ಹಾಗೂ ಕವಿತಾ ಲೇಔಟ್​​ ನಲ್ಲಿ ಮತ ಪ್ರಚಾರ ನಡೆಸಿದ್ರು.. ಅಪಾರ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ಮತ ಯಾಚನೆ ನಡೆಸಿದ ಅವ್ರು ಆರ್​ ಪಿ ಸಿ ಲೇಔಟ್​ ನ ಹಿರಿಯರ ಆಶಿರ್ವಾದ ಪಡೆದ್ರು.. ಜೊತೆಗೆ ಈ ಹಿಂದೆ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕೆಲಸಗಳು ಹಾಗೂ ಸರ್ಕಾರದ ಯೋಜನೆಗಳ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತ ಪಡಿಸಿದ್ರು.

ಮತ್ತೊಂದೆಡೆ, ಗೋವಿಂದರಾಜ ನಗರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಮಿಂಚಿನ ಮತ ಪ್ರಚಾರ ನಡೆಸಿದ್ರು. ಮೂಡಲಪಾಳ್ಯದ‌ ಸೀತಾರಾಮಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತ ಪ್ರಚಾರ ಆರಂಭಿಸಿದ ಅವರು, ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮೂಡಲಪಾಳ್ಯ ಸುತ್ತಮುತ್ತಾ ಮತಯಾಚನೆ ನಡೆಸಿದರು. ಅಲ್ಲದೇ ಈ ಬಾರಿ ಕೂಡ ಅತ್ಯಧಿಕ ಮತಗಳಿಂದ ಜಯಗಳಿಸುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Next Story

RELATED STORIES