ರೂಮಿನಲ್ಲಿ ದುಡ್ಡು ಮಡಚಿಟ್ಟು ಬಂದಿದ್ದೇನಾ..?: ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕುಮ್ಮಕ್ಕಿನಿಂದಲೆ ಈ ದಾಳಿ ನಡೆದಿದೆ. ಇದನ್ನು ನಾನೂ ಉಗ್ರವಾಗಿ ಖಂಡಿಸುತ್ತೇನೆ. ದಾಳಿಗಳ ಮಾಡಿಸಿ ನನ್ನ ಎದರಿಸೋಕೆ ಸಾಧ್ಯವಿಲ್ಲ. ನನಗೆ ಯಾವ ಹೆದರಿಕೆಯು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿಯಲ್ಲಿ ಐಟಿ ದಾಳಿ ವಿಚಾರ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾತನಾಡಿದ ಅವರು, ನಾನೂ ರೆಸಾರ್ಟ್ ನಲ್ಲಿ ಉಳಿದುಕೊಂಡು ನಾಲ್ಕು ದಿನವಾಗಿದೆ. ಈಗ ದಾಳಿಮಾಡುತ್ತಾರೆ ಎಂದರೆ ಏನು ಅದರ ಅರ್ಥ? ನಾನೂ ಆ ರೂಮಿನಲ್ಲಿ ದುಡ್ಡು ಮಡಚಿಟ್ಟು ಬಂದಿದ್ದೇನೆ ಅಂತನಾ ಅರ್ಥ? ಈಗ ಅಲ್ಲಿ ಹಣ ಸಿಕ್ಕಿತು ಎಂದರೆ ಏನು ಅದರ ಅರ್ಥ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ಮೊದಲೆಯನದಾಗಿ ನಾನೂ ಆ ರೂಮಿನಲ್ಲಿ ಇರಲಿಲ್ಲ. ಇಬ್ರಾಹಿಂ ಅಥವ ಇನ್ಯಾರಾದರು ಇರಬಹುದು. ಚುನಾವಣ ವೇಳೆ ಈ ದಾಳಿಗಳು ರಾಜಕೀಯ ಪ್ರೇರಿತವಲ್ಲದೆ ಇನ್ನೇನು? ಬಿಜೆಪಿಗೆ ಸೋಲಿನ ಬೀತಿ ಕಾಡುತ್ತಿದೆ. ಇದರಿಂದ ವಾಮಮಾರ್ಗದಲ್ಲಿ ನಮ್ಮನ್ನ ಎದರಿಸಲು ನೋಡುತ್ತಿದ್ದಾರೆ. ಅವರು ಈಡಿಯನ್ನಾದರು ದುರುಪಯೋಗ ಪಡಿಸಿಕೊಳ್ಳಲಿ. ಐಟಿಯಾದರು ದುರುಪಯೋಗ ಮಾಡಿಕೊಳ್ಳಲಿ. ಜನ ನನ್ನ ಪರವಾಗಿದ್ದಾರೆ.ಈ ದಾಳಿಗಳಿಂದ ಅನುಕೂಲವಾಗುತ್ತದೆ ಎಂದು ಬಿಜೆಪಿ ಅಂದುಕೊಂಡರೆ ಅವರಂತ ಮೂರ್ಖರಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.