Top

ರಾಯಚೂರಿನ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಳಜಗಳ

ರಾಯಚೂರು : ಚುನಾವಣೆ ಹಿನ್ನೆಲೆ ಅಭ್ಯರ್ಥಿಳು ಮತಯಾಚನೆ ಪ್ರಚಾರ ಅಂತ ಭೀಜಿಯಾಗಿದ್ದಾರೆ. ಆದರೆ ರಾಯಚೂರು ಜಿಲ್ಲಾ ಕಾಂಗ್ರೇಸ್​ನಲ್ಲಿ ಮಾತ್ರ ಓಳಜಗಳ ಇನ್ನು ಶಮನ ಆಗಿಲ್ಲ. ಜಿಲ್ಲೆಯ ಕೆಲ ಪ್ರಮುಖ ಮುಖಂಡರು ರಾಯಚೂರು ನಗರ ಕ್ಷೇತ್ರದ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬರುತ್ತಿಲ್ಲ, ಯಾವುದೇ ಸಭೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಬಗ್ಗೆ ಮುಖಂಡರಿಗೆ ಕೇಳಿದರೆ ಸಂಸದ ಬಿ.ವಿ.ನಾಯಕ್ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಭೋಸರಾಜು ನಮ್ಮನ್ನು ಪ್ರಚಾರ ಮಾಡುವಂತೆ ಯಾರು ಆಹ್ವಾನ ಮಾಡಿಲ್ಲ ಹೀಗಾಗಿ ನಾವು ಪ್ರಚಾರ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಇತ್ತೀಚೆಗೆ ವಿಪಕ್ಷ ನಾಯಕ್ ಮಲ್ಲಿಕಾರ್ಜುನ ಖರ್ಗೆ ರಾಯಚೂರು ನಗರ ಕ್ಷೇತ್ರದ ಅಭ್ಯರ್ಥಿ ಸೈಯದ್ ಯಾಸಿನ್ ಪರ ಪ್ರಚಾರಕ್ಕ ಆಗಮಿಸಿದ್ದ ವೇಳೆ ವೇದಿಕೆಯ ಮೇಲೆಯೇ ಜಿಲ್ಲಾ ಮುಖಂಡರು ವಾಗ್ವಾದಕ್ಕಿಳಿದು ಪಕ್ಷದಲ್ಲಿನ ಅಸಮಧಾನತೆಯನ್ನ ಹೊರ ಹಾಕಿದ್ದರು. ಈ ಬಗ್ಗೆ ಜಿಲ್ಲೆಯ ಸಂಸದರನ್ನ ಕೇಳಿದರೆ, ನಮ್ಮಲ್ಲಿ ಯಾವುದೇ ವೈಮನಸ್ಸಿಲ್ಲ ಸಂವಹನ ತೊಂದರೆಯಿಂದ ಹೀಗಾಗುತ್ತಿದೆ. ಆದರೆ ಪಕ್ಷದ ಭಿನ್ನಮತದಿಂದ ಕ್ಷೇತ್ರದ ಮೇಲೆ ಅಡ್ಡಪರಿಣಾಮ ಬೀರುತ್ತಿದ್ದು ಕೊನೆ ಗಳಿಗೆಯಲ್ಲಿ ಇದು ಸರಿಯಲ್ಲ. ಇದರಿಂದ ಅಭ್ಯರ್ಥಿಯ ಮೇಲೆ ಪಡ್ಡ ಪರಿಣಾಮ ಬೀಳುತ್ತದೆ. ಹಾಗಾಗಿ ಇವುಗಳನ್ನ ಬದಿಗಿಟ್ಟು ಹೊಂದಾಣಿಕೆಯಿಂದ ಮುನ್ನಡೆಯುವ ಅವಶ್ಯಕಥೆ ಕಾಂಗ್ರೇಸ್ ಗೆ ಇದೆ ಎಂಬುದು ಹಿರಿಯರ ಅಭಿಪ್ರಾಯವಾಗಿದೆ.

Next Story

RELATED STORIES