Top

ಮೋದಿಗೆ ಓಟು ಹಾಕಿ : ಸಿದ್ದರಾಮಯ್ಯ ಎಡವಟ್ಟು

ಮಂಡ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರಸ್ವಾಮಿ ಪರ ಅಬ್ಬರದ ಪ್ರಚಾರ ಮತ್ತು ರೋಡ್ ಷೋ ನಡೆಸಿದರು..

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಳವಳ್ಳಿ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಮನೆಗಳನ್ನ ಕಟ್ಟಿಸಿಕೊಟ್ಟಿದ್ರೆ ಅದು ನಾನು ಮತ್ತು ನರೇಂದ್ರ ಮೋದಿ ಎಂದು ಉಚ್ಚರಿಸಿದ್ರು. ಇನ್ನು ಮುಂದುವರೆದು ಭಾಷಣ ಮಾಡುವ ಭರಾಟೆಯಲ್ಲಿ ನರೇಂದ್ರ ಮೋದಿಗೆ ಓಟು ಕೊಟ್ಟರೆ ನನಗೆ ಓಟು ಕೊಟ್ಟಂತೆ ಎಂದರು. ಇದು ಒಂದಲ್ಲಾ ಎರಡಲ್ಲ ಬರೋಬ್ಬರಿ ಮೂರು ಬಾರಿ ಉಚ್ಚರಿಸಿದ್ರು.

ಸಿಎಂ ಭಾಷಣ ಕೇಳಿ ತಬ್ಬಿಬ್ಬಾದ ಕಾರ್ಯಕರ್ತರು ಸಿದ್ದು ಭಾಷಣವನ್ನು ಅಣಕಿಸುವಂತೆ ಕೇಕೆ ಹಾಕಿದ್ರು. ಕೊನೆಗೆ ಎಚ್ಚೆತ್ತ ಸಿಎಂ ನರೇಂದ್ರ ಮೋದಿ ಅಲ್ಲಾ ನರೇಂದ್ರಸ್ವಾಮಿ ಎಂದು, ತಪ್ಪನ್ನು ಸರಿಮಾಡಿಕೊಂಡು ಹೇಳಿದರು. ಕೊನೆಗೆ ನರೇಂದ್ರ ಸ್ವಾಮಿ ಮಳವಳ್ಳಿಗೆ ನರೇಂದ್ರ ಮೋದಿ ಇದ್ದಂತೆಯೇ ಆ ನರೇಂದ್ರ ಮೋದಿ ಮಿತ್ಯ. ಈ ನರೇಂದ್ರಸ್ವಾಮಿ ಸತ್ಯ. ಮೋದಿ, ಸ್ವಾಮಿ ಮುಖ್ಯವಲ್ಲ ನರೇಂದ್ರ ಎಂಬುದೇ ಮುಖ್ಯ ಎಂದು ಹೇಳಿದರು...

ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಪ್ರಚಾರಕ್ಕಾಗಿ ಆಗಮಿಸಿದ ಹೆಲಿಪ್ಯಾಡ್ ಅನ್ನು ಮಳವಳ್ಳಿ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ರು. ಜೊತೆಗೆ ಇದೇ ವೇಳೆ ಕ್ಷೇತ್ರದ ಅಭ್ಯರ್ಥಿ ನರೇಂದ್ರಸ್ವಾಮಿ ನಾಲ್ಕೈದು ಕಡೆ ಸಿಎಂ ಪ್ರಚಾರ ಮಾಡೋದಾಗಿ ಮುಖಂಡರಿಗೆ ಹೇಳಿದ್ರು. ಇದಕ್ಕೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ ಅವ್ರು ಯಾರು ಕೇಳಿ ಅಷ್ಟೊಂದು ಕಡೆ ಪ್ರಚಾರ ಸಭೆ ಆಯೋಜಿಸಿದ್ದಾರೆ. ನಾನು ಒಂದು ಕಡೆ ಮಾತ್ರ ಹೋಗೋದು ಎಂದು ಸಿಡಿಮಿಡಿ ಗೊಂಡ ಪ್ರಸಂಗವೂ ನಡೆಯಿತು.

Next Story

RELATED STORIES