Top

ಮೊಳಕಾಲ್ಮೂರು ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಕೈ ಅಭ್ಯರ್ಥಿ ಡಾ.ಯೋಗೀಶ್ ಬಾಬು ಮತಯಾಚನೆ

ಮೊಳಕಾಲ್ಮೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಜಯಸಾಧಸಿಲು ಮುಂದಾಗಿರುವ ಕಾಂಗ್ರೆಸ್ ಪರ ಅಭ್ಯರ್ಥಿ ಯೋಗೀಶ್ ಬಾಬು ಪ್ರಚಾರ ಮಾಡುವಲ್ಲಿ ನಿರತರಾಗಿದ್ದಾರೆ.

ಕ್ಷೇತ್ರದ ಹಾನಗಲ್ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ತೆರಳಿ ಕಾರ್ಯಕರ್ತರೊಡನೆ ಮನೆ ಮನೆ ಪ್ರಚಾರಕ್ಕಿಳಿದ್ದಿದ್ದಾರೆ. ಸಿದ್ದರಾಮಯ್ಯನವರ ಅಭಿವೃದ್ದಿಯನ್ನು ಗಮನಿಸಿ ಈ ಬಾರಿ ಮೊತ್ತೊಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕೈ ಮುಗಿದು ಮತಯಾಚಿನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಜನರ ಬೆಂಬಲ ನೋಡಿದರೇ ಈ ಬಾರಿಯೂ ನಮಗೆ ಗೆಲುವಿನ ಅಲೆ ಇದೆ. ಅಷ್ಟೇಲ್ಲದೆ ಮೊಳಕಾಲ್ಮೂರು ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ಈ ಭಾಗದ ಜನರು ಸ್ಥಳೀಯ ಯುವ ನಾಯನನ್ನು ಬೆಂಬಲಿದ್ದಾರೆ ಎಂದರು.

ಇನ್ನೂ ಈಗಾಗಲೇ ಜಿಲ್ಲಾಪಂಚಾಯಿತಿ ಸದಸ್ಯನಾಗಿರುವ ಡಾ ಯೋಗೀಶ್ ಬಾಬು ಅವರನ್ನು ಈ ಬಾರಿ ಗೆಲ್ಲಿಸಲೇ ಬೇಕೆಂದು ಕ್ಷೇತ್ರದಲ್ಲಿ ಹಗಲು ರಾತ್ರಿ ಎನ್ನದೆ ಪ್ರಚಾರಕ್ಕಿಳಿದ್ದಾರೆ. ಡಾ ಯೋಗೀಶ್ ಬಾಬು ಈ ಭಾಗದ ಜನರ ನಾಡಿ ಮಿಡಿತ ಹರಿತವರು. ಸ್ಥಳೀಯ ಯುವಕ ಗೆದ್ದರೆ ನಮ್ಮ ಮನೆಮಗನ ಬಳಿ ಕೆಲಸ ಮಾಡಿಕೊಂಡಷ್ಟೇ ಕ್ಷೇತ್ರದ ಜನರಿಗೆ ನೇರವಾಗುತ್ತಾರೆ ಎನ್ನುತ್ತಾರೆ ಸ್ಥಳೀಯ ಮತದಾರರು.

Next Story

RELATED STORIES