Top

ಮೈಸೂರಿನಲ್ಲಿ ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡ ದೇವೇಗೌಡ

ಕೆ.ಆರ್.ಪೇಟೆ ಕ್ಷೇತ್ರ ಹಾಗೂ ವರುಣಾ ಕ್ಷೇತ್ರ ಗೆಲ್ಲುವ ಶಕ್ತಿ ಇಲ್ಲ. ಉಳಿದ 9 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹೇಳಿಕೆ ನೀಡುವ ಮೂಲಕ ಮೈಸೂರಿನಲ್ಲಿ ಚುನಾವಣೆಯ ಮುನ್ನವೇ ಸೋಲೊಪ್ಪಿಕೊಂಡಂತಾಗಿದೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಕೆ.ಆರ್.ಪೇಟೆ ಹಾಗೂ ವರುಣಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲುವ ಮುನ್ಸೂಚನೆ ನೀಡಿದ್ದಾರೆ.

ವರುಣಾ ವಿಧಾನಸಭಾ ಕಷ್ಟ ಇದೆ. ನಾನೂ ವಾಸ್ತವಾಂಶವಾಗಿ ಹೇಳ್ತೇನೆ. ಎಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗೆ ಇದೆ. ಎರಡು ಕ್ಷೇತ್ರ ಕಷ್. ಇತ್ತೀಚಿನ ಬೆಳವಣಿಗೆಗಳನ್ನ ನೋಡಿ ಈ ಮಾತನ್ನ ಹೇಳ್ತೇನೆ ಎಂದರು.

ಉಳಿದಂತೆ ರಾಜ್ಯದಲ್ಲಿ ಜೆಡಿಎಸ್ ಪರ ಅಲೆ ಇದೆ. ನಾವು ಕಿಂಗ್ ಮೇಕರ್ ಆಗುವುದಿಲ್ಲ. ಕಿಂಗ್ ಆಗುತ್ತೇವೆ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

Next Story

RELATED STORIES