Top

ಮತದಾರನನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಂತೋಷ್ ಲಾಡ್

ಧಾರವಾಡ : ಜಿಲ್ಲೆಯ ಕಲಘಟಗಿ ಮತಕ್ಷೇತ್ರದ ಶಾಸಕ ಸಂತೋಷ್ ಲಾಡ್ ಮತ್ತೊಮ್ಮೆ‌ ನಾಲಿಗೆ ಹರಿಬಿಟ್ಟಿದ್ದಾರೆ. ಪ್ರಚಾರದ ವೇಳೆ ಪ್ರಶ್ನೆ ಕೇಳಿದ ಮತದಾರನನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿರೋ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಶ್ನಿಸಿದ ಮತದಾರನೋರ್ವನನ್ನು ಸಚಿವ ಸಂತೋಷ್ ಲಾಡ್ ಮರಾಠಿ ಭಾಷೆಯಲ್ಲಿ ನಿಂದಿಸಿದ್ದಾರೆ.

ನಿನ್ನೆ ಕಲಘಟಗಿ ತಾಲೂಕಿನ ಸಂಗಮೇಶ್ವರ ಗ್ರಾಮದಲ್ಲಿ ಸಂತೋಷ್ ಲಾಡ್ ಚುನಾವಣಾ ಪ್ರಚಾರ ಹಮ್ಮಿಕೊಂಡಿದ್ದರು. ಸ್ವಜಾತಿಯರೇ ಹೆಚ್ಚಿರುವ ಈ ಗ್ರಾಮದಲ್ಲಿ ಪರಿಸ್ಥಿತಿ ತಮ್ಮ ಪರವಾಗಿದೆ ಎಂದುಕೊಂಡಿದ್ದರು. ಹೀಗಾಗಿ ಕ್ಷೇತ್ರದಲ್ಲಿ ತಾವು ಏನೇನ್ ಅಭಿವೃದ್ದಿ ಕಾರ್ಯ ಮಾಡಿದ್ದಾರೆಂದು ಭಾಷಣ ಮಾಡುತ್ತಿದ್ದರು. ತಮ್ಮ ಭಾಷಣ ವೇಳೆ ಕಲಘಟಗಿ ಕ್ಷೇತ್ರದಲ್ಲಿ 7 ಸಾವಿರ ಕೊಳವೆ ಬಾವಿಗಳನ್ನು ಕೊರೆಸಿದ್ದಾಗಿ ಹಾಗೂ ತಾವು ಪ್ರಚಾರ ಮಾಡುತ್ತಿದ್ದ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಉಚಿತವಾಗಿ ಕೊರೆಸಿದ್ದಾಗಿ ಪ್ರಸ್ತಾಪಿಸಿದರು. ಈ ವೇಳೆ ಮತದಾರನೋರ್ವ ಸಚಿವರನ್ನು ಈ ಬಗ್ಗೆ ಪ್ರಶ್ನಿಸಿದ್ದಾನೆ. ಕೇಸಿಂಗ್ ಪೈಪ್ ನಾವು ಹಾಕಿದಿವಿ. ಉಚಿತ ಕೊಳವೆ ಬಾವಿ ಕೊರೆಸಿದ್ದ ಹೆಂಗ್ ಆಗ್ತೇತ್ರಿ ಎಂದು ಪ್ರಶ್ನಿಸಿದ್ದಾನೆ. ಈ ಪ್ರಶ್ನೆ ಕೇಳಿ ರೊಚ್ಚಿಗೆದ್ದ ಸಚಿವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

"ಮುಕುಳ್ಯಾಗ್ ಏನ್ ಸೊಕ್ಕ ಐತಿ ಏನ್ ಮಗನ. ಕೇಸಿಂಗ್ ಪೈಪ್ ನಿಮ್ಮದ್ ಆದ್ರ ಏನ್ ಆತ್ ನಿಮ್ಮೌನ್. ಏ ಪೊಲೀಸ್ರ ಯಾರದೀರಿ ಇಲ್ಲಿ ಕರೀರಿ. ನಿನಗ್ ತಿಳಿಲಿಲ್ಲ ಅಂದ್ರ ಹೊರಗ್ ಹೋಗ್ಲೆ ಅಂತಾ ಹರಿಹಾಯ್ದಿದ್ದಾರೆ" ಕೇಸಿಂಗ್ ಪೈಪ್ ಅವರು ಕೊಟ್ಟಿದ್ರೆ ಏನಾಯ್ತು ನಾನು ಕೊಳವೆ ಬಾವಿ ಕೊರೆಸಿದ್ದೇನೋ ಇಲ್ವೋ. ಈಗ ಈ ರೀತಿ ಕುಡಿದು ಬಂದು ಗಲಾಟೆ ಮಾಡ್ತಿದ್ದಾನೆ ಎಂದು ಸಂತೋಷ್ ಲಾಡ್ ಹೇಳಿದ್ದಷ್ಟೇ ಅಲ್ಲದೇ ಇವತ್ತು ನಾನು ಮಾಡಿದ ಕೆಲಸಗಳನ್ನು ಬಿಡಿ, ನಮ್ಮ ಸರ್ಕಾರ ಮಾಡಿದ ಕೆಲಸ ನೋಡಿಯಾದ್ರೂ ಮತ ನೀಡಿ ಎಂದು ಮತಯಾಚನೆ ಮುಂದುವರೆಸಿದರು.

Next Story

RELATED STORIES