Top

ಬೀದರ್​ನಲ್ಲಿ ಕೃಷಿ ಸೊಸೈಟಿ ದರೋಡೆಗೆ ಯತ್ನ

ಬೀದರ್ : ಪ್ರಾಥಮಿಕ ಕೃಷಿ ಪತ್ತಿನ ಕೋ ಆಪರೇಟೀವ್ ಬ್ಯಾಂಕ್ ದರೋಡೆಗೆ ಯತ್ನಿಸಿದ ಘಟನೆ ಬೀದರ್ ಜಿಲ್ಲೆಯ ನಡೆದಿದೆ. ನಗರದ ಮೈಲೂರಿನಲ್ಲಿರುವ ಪ್ರಾಥಮಿಕ ಕೃಷಿ ಪತ್ತಿಸ ಕೋಆಪರೇಟೀವ್ ಬ್ಯಾಂಕಗ್ ಗೆ ನಸುಕಿನ ಜಾವ ಬ್ಯಾಂಕ್ ನ ಶೆಟರ್ ಮುರಿದು ಒಳ ನುಗ್ಗಿದ ದರೋಡೆಕೋರರು ಬ್ಯಾಂಕ್ ಒಳಗಿನ ಸಿಸಿ ಕ್ಯಾಮರ ದ್ವಂಸಗೊಳಿಸಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದಾರೆ.. ಹಣ ಇರುವ ಪೆಟ್ಟಿಗೆ ಮುರಿಯಲು ಸಾಧ್ಯವಾಗದ ಕಾರಣ ಖಧೀಮರು ಕೃತ್ಯಕ್ಕೆ ಬಳಸು ತಂದಿದ್ದ ವಸ್ತುಗಳನ್ನು ಅಲ್ಲೇ ಬಿಟ್ಟು ಹಾರ್ಡ್ ಡಿಸ್ಕ್ ಸಮೇತ ಪರಾರಿಯಾಗಿದ್ದಾರೆ.

ಇನ್ನು ಸುದ್ದಿ ತಿಳಿದ ಬ್ಯಾಂಕ್ ಅಧಿಕಾರಿಗಳು ಹಾಗೂ ಗಾಂಧೀಗಂಜ್ ಪೊಲೀಸ್ರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಚುನಾವಣೆ ಹಿನ್ನಲೆಯ ಮತದಾರರಿಗೆ ಹಣ ಹಂಚುವ ಸಲುವಾಗಿ ಪೊಲೀಸ್ರನ್ನ ದಾರಿ ತಪ್ಪಿಸಲು ಇಂತ ಕೃತ್ಯ ವ್ಯಸಗಿರಬಹುದೆ ಎನ್ನಲಾಗಿದೆ. ಸದ್ಯ ಬ್ಯಾಂಕ್ ನಲ್ಲಿ ಯಾವುದೇ ಹಣ ದರೋಡೆಯಾಗಿರುವ ಬಗ್ಗೆ ವರದಿಯಾಗಿಲ್ಲಾ ಎನ್ನಲಾಗಿದೆ. ಇನ್ನು ವೃತ್ತಿ ನಿರಿತ ದರೋಡೆಕೋರರಿಂದಲೇ ಕೃತ್ಯ ನಡೆದಿರಬಹುದೆ ಎಂದು ಪೊಲೀಸ್ರು ಅನುಮಾನ ವ್ಯಕ್ತಪಡೆಸಿದ್ದಾರೆ. ಸದ್ಯ ಗಾಂಧೀಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸ್ರು ಬಲೆ ಬಿಸಿದ್ದಾರೆ.

Next Story

RELATED STORIES