Top

ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಬಿಜೆಪಿ ವಿರುದ್ಧ ಕೆಪಿಸಿಸಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕರ್ನಾಟಕದ ಚುನಾವಣೆ ಪ್ರಚಾರ ವೇಳೆ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ವಿವಾದವನ್ನ ಇತ್ಯರ್ಥ ಮಾಡೋದಾಗಿ ಪ್ರಧಾನಿ ಹೇಳಿದ್ದಾರೆ. ಆದ್ರೆ ಚುನಾವಣಾ ಸಂಹಿತೆ ಪ್ರಕಾರ ಪ್ರಣಾಳಿಕೆ ವಿಚಾರ ಬಿಟ್ಟು ಬೇರೇನು ಮಾತಾಡುವಂತಿಲ್ಲ ಆದ್ರೆ ಮೋದಿ ಮಹದಾಯಿ ವಿಚಾರ ಪ್ರಸ್ತಾಪ ಮಾಡಿ ಚುನಾವಣಾ ಸಂಹಿತೆ ಉಲ್ಲಂಘಿಸಿದ್ದಾರೆ ಅಂತ ದೂರು ನೀಡಲಾಗಿದೆ... ಎಲೆಕ್ಷನ್ ಸಮಯದಲ್ಲಿ ಒಬ್ಬ ಪ್ರಧಾನಿ ಈ ರೀತಿ ಮಾತಾಡೋದು ಸರಿಯಿಲ್ಲ ಮೋದಿ ಪ್ರಧಾನಿಯಾಗಿರುವುದು ಇಡೀ ದೇಶಕ್ಕೆ ಪ್ರಧಾನಿಯೇ ಹೊರತು ಬಿಜೆಪಿಗಲ್ಲ.. ಇನ್ನು ಮುಂದೆ ಈ ರೀತಿಯ ಹೇಳಿಕೆ ಗಳನ್ನ ಪ್ರಧಾನಿಗಳು ನೀಡದಂತೆ ಆಯೋಗ ಕೂಡಲೇ ತಡೆ ಒಡ್ಡಬೇಕು ಅಂತ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆಇ ರಾಧಾಕೃಷ್ಣ ಒತ್ತಾಯ ಮಾಡಿದರು..

Next Story

RELATED STORIES