Top

ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ, ಕಾರ್ಯಕರ್ತರಿಂದ ಉರುಳು ಸೇವೆ

ದಾವಣಗೆರೆ : ಮತದಾನದ ದಿನ ಹತ್ತಿರವಾಗುತ್ತಾ ಇರುವಹಾಗೆ, ತಮ್ಮ ಬೆಂಬಲಿತ ಅಭ್ಯರ್ಥಿ ಗೆಲುವಿಗಾಗಿ, ಕಾರ್ಯಕರ್ತರು ವಿನೂತನವಾಗಿ ಹರಕೆ ತೀರಿಸುತ್ತಿದ್ದಾರೆ. ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರಪ್ಪ ಗೆಲ್ಲಬೇಕು ಎಂದು, ಜಗಳೂರಿನ ದೊಡ್ಡ ಮಾರಿಕಾಂಬಾ ದೇವರಿಗೆ ಕಾರ್ಯಕರ್ತರು ಉರುಳು ಸೇವೆ ಮಾಡಿದರು.

ಬೆಳಿಗ್ಗೆಯೇ ಜಗಳೂರಿನ ದೊಡ್ಡ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ, ತಮ್ಮ ನೆಚ್ಚಿನ ಅಭ್ಯರ್ಥಿ, ಬಿಜೆಪಿಯ ಎಸ್ ಬಿ ರಾಮಚಂದ್ರಪ್ಪ ಅವರು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ದೇವಸ್ಥಾನದ ಆವರಣದಲ್ಲಿ, ದೇವಾಲಯದ ಸುತ್ತ ಉರುಳು ಸೇವೆ ನೆರವೇರಿಸಿದರು. ಈ ಮೂಲಕ ಬಿಜೆಪಿಯ ಅಭ್ಯರ್ಥಿಯ ಗೆಲುವಿಗಾಗಿ ವಿಶೇಷ ಪೂಜೆ ನೆರವೇರಿಸಿದರು.

Next Story

RELATED STORIES