Top

ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್

ಗಂಗಮ್ಮನ ಗುಡಿ ಡೇವಿಡ್ ರುಂಡ, ಮುಂಡ ಬೇರ್ಪಡಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ . ಬಂಧಿತರು ಪ್ರಸಾದ್ ಅಲಿಯಾಸ್ ಮೆಂಟಲ್, ವೇಣು, ಮಹೇಶ್, ಮಣಿಕಂಠ. ಇನ್ನು ಬಂಧಿತ ವೇಣು, ಮತ್ತು ಕೊಲೆಯಾದ ಡೇವಿಡ್ ಒಂದೇ ಹುಡುಗಿಯನ್ನು ಪ್ರೀತಿ ಮಾಡ್ತಿದ್ರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜೋರು ಗಲಾಟೆ ನಡೆಯುತಿತ್ತು.‌ಕಳೆದ 4 ರಂದು ಹೊರ ಹೋಗಿ ಬರ್ತಿನಿ ಎಂದು ಹೋದವನು ರಾಮಚಂದ್ರಪುರ ಬಸ್ ನಿಲ್ದಾಣದ ಬಳಿ ಬಂದಿದ್ದ. ಅಂದೂ ಕೂಡ ವೇಣು ಕಿರಿಕ್ ತೆಗೆದು ಜಗಳಕ್ಕೆ ನಿಂತಿದ್ದ. ನಂತರ ಮಾತಿಗೆ ಮಾತು ಬೆಳೆದು ಮೊದಲೇ ನಿರ್ಧರಿಸಿದಂತೆ ಡೇವಿಡ್ ನನ್ನ ಕೊಂದು ತಲೆಯನ್ನ ಡೇವಿಡ್ ಮನೆ ಬಳಿ‌ ಎಸೆದಿದ್ದರು .ಈ ಪ್ರಕರಣ ಗಂಗಮ್ಮನಗುಡಿ‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Next Story

RELATED STORIES