Top

ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿಸಲು ಬಿಜೆಪಿ ಯತ್ನ: 2 ಬಸ್ ವಶ

ಮತದಾರ ಸೆಳೆಯಲು ಬಿಜೆಪಿ ಕಾರ್ಯಕರ್ತರು ಪ್ರವಾಸ ಆಯೋಜಿಸಿದ್ದ ಎರಡು ಬಸ್​ಗಳನ್ನು ಸಖರಾಯಪಟ್ಟಣದ ಕೇತಮಾರನಹಳ್ಳಿಯಲ್ಲಿ ಚುನಾಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬಿಜೆಪಿಗೆ ಮತ ನೀಡುವಂತೆ ಆಣೆಮಾಡಲು ಮತದಾರರನ್ನು ಧರ್ಮಸ್ಥಳಕ್ಕೆ ಕರೆದ್ಯೋಯಲಾಗಿತ್ತು. ಸಿ.ಟಿ.ರವಿ ಪರ ಮತ ಹಾಕುವಂತೆ ಧರ್ಮಸ್ಥಳದಲ್ಲಿ ಆಣೆಗೆ ಮುಂದಾದ ಕಾರ್ಯಕರ್ತರು. ಕೇತಮಾರನಹ್ಳಳ್ಳಿ ಹಾಗೂ ಗೋಲ್ಲರಹಟ್ಟಿ ಮತದಾರಿಗೆ ಆಮೀಷ ಒಡ್ಡಲಾಗಿತ್ತು.

ಬೆಳ್ಳಿಗಿನ ಜಾವ ಮೂರು ಬಸ್ಸ್ ಗಳಲ್ಲಿ ಹೋರಟ ಮತದಾರರು. ಚುನಾವಣಾಧಿಕಾರಿ ಗಳಿಂದ ಎರೆಡು ಬಸ್ಸ್ ಗಳ ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ಗೆಲ್ಲಲು ಕೆಳಮಟ್ಟಕ್ಕೆ ಇಳಿದ ಸಿಟಿ ರವಿ ಬೆಂಬಲಿಗರೆಂದು ಸ್ಥಳೀಯರ ಆರೋಪ ಮಾಡಿದ್ದು, ಈ ಎರೆಡು ಗ್ರಾಮದ ವ್ಯಾಪ್ತಿಯಲ್ಲಿ ವೀರಶೈವ ಹಾಗೂ ಗೋಲ್ಲ ಸಮೂದಾಯದ 650ಕ್ಕೂ ಮತದಾರರು ಇದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಮತದಾರ ಒಲವು ತೋರಿದ್ದರು ಎಂದು ಹೇಳಲಾಗಿದ್ದು, ಇದನ್ನು ತಪ್ಪಿಸಲು ಬಿಜೆಪಿ ಹಣ ನೀಡಿ ಧರ್ಮದಲ್ಲಿ ಆಣೆ ಪ್ರಮಾಣಕ್ಕೆ ಅಣೆ ಮಾಡಿಸಲು ಯತ್ನಿಸಿದ್ದು, ಈ ಬಗ್ಗೆ ನಿನ್ನೆ ರಾತ್ರಿಯೇ ಚುನಾವಣ ಆಯೋಗಕ್ಕೆ ದೂರು ಬಂದಿತ್ತು.

Next Story

RELATED STORIES