Top

ತತ್ವ-ಸಿದ್ಧಾಂತಗಳ ನಡುವಿನ ಹೋರಾಟ: ಖರ್ಗೆ ಬಣ್ಣನೆ

ಈ ಬಾರಿ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆ ಕೇವಲ ಪಕ್ಷಗಳ ನಡುವಿನ ಚುನಾವಣೆ ಅಲ್ಲ. ಎರಡು ತತ್ವ- ಸಿದ್ದಾಂತಗಳ ನಡುವಿನ ಚುನಾವಣೆ ಎಂದು ಸಂಸದೀಯ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಯಡಿಯೂರಪ್ಪರನ್ನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದರೆ ಮೋದಿ ಬಂದು ನನಗೆ ವೋಟ್ ನೀಡಿ ಅಂತಾರೆ. ಇದು ನಮಗೆ ಅರ್ಥವಾಗುತ್ತಿಲ್ಲ ಮೋದಿಯವರು ಇಲ್ಲಿಗೆ ಬಂದು ಮುಖ್ಯಮಂತ್ರಿಯಾಗುವವರಿದ್ದಾರಾ ಎಂದು ಪ್ರಶ್ನಿಸಿದರು.

ದೇಶದಲ್ಲಿ ಹೂಡಿಕೆ ವಿಚಾರದಲ್ಲಿ ಕರ್ನಾಟಕ ನಂ ೧ ಇದೆ. ಗುಜರಾತ್ ಮಾಡೆಲ್ ಅಂತಿದ್ದ ನೀವು ಹಿಂದೆ ಉಳಿದಿದ್ದಿರಿ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ ಆದ್ರೆ ಕರ್ನಾಟಕದಲ್ಲಿ ನಮ್ಮ ಸರ್ಕಾರ 55. ಲಕ್ಷ ಉದ್ಯೋಗ ನೀಡಿದ್ದೇವೆ ಇಲ್ಲಿ ನಿಮ್ಮ ಪಕ್ಷದ ನಾಯಕರು ಮತ್ತು ನಮ್ಮ ಪಕ್ಷದ ಸ್ಥಳಿಯ ನಾಯಕರ ನಡುವೆ ಆದ್ರೆ ನೀವು ಬಂದು ನಮ್ಮ ಮುಖ್ಯಮಂತ್ರಿಯನ್ನ ಹೀಯಾಳಿಸ್ತಿರಿ ನಿಮಗೆ ಶೋಭೆ ತರಲ್ಲ ಎಂದು ಖರ್ಗೆ ಹೇಳಿದರು.

ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ನಿಮ್ಮ ಯಡಿಯೂರಪ್ಪ ಜೈಲೂಟ ಮಾಡಿ ಬಂದಿದ್ದಾರೆ. ಅಂತಹವರನ್ನ ನೀವು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಿರಿ. ಮುಧೋಳ ನಾಯಿ ಜೊತೆ ನಮ್ಮ ಹೋಲಿಸಿದ್ದಾರೆ. ಆದರೆ ಆರ್. ಎಸ್. ಎಸ್ ಮತ್ತು ಇವರ ಮನೆಯಲ್ಲಿ ಒಂದು ನಾಯಿ ಕೂಡಾ ದೇಶಕ್ಕಾಗಿ ಸತ್ತಿಲ್ಲ. ಇವತ್ತು ಕಾಂಗ್ರೆಸ್ ನಾಯಕರು ನಮ್ಮ ದೇಶಕ್ಕಾಗಿ ಸತ್ತಿದ್ದಾರೆ. ಇಂತವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಖರ್ಗೆ ಟೀಕಿಸಿದರು.

ಮಹದಾಯಿ ವಿಚಾರ ಬಗೆಹರಿಸಲು ನಿಮ್ಮಿಂದ ಆಗಿಲ್ಲ. ಇಂದಿರಾಗಾಂಧಿ ಕೃಷ್ಣಾ ನದಿ ನೀರಿನ ಸಮಸ್ಯೆ ಹೇಗೆ ಬಗೆ ಹರಿಸಿದ್ದಾರೆ ಹಾಗೆ ಮಹದಾಯಿ ನೀರಿನ ಸಮಸ್ಯೆ ಬಗೆ ಹರಿಸಲು ಮೋದಿಯವರಿಗೆನು ಧಾಡಿ ಆಗಿದೆಯಾ? ಚುನಾವಣೆ ಬಂದಾಗ ಈಗ ಮಹದಾಯಿ ವಿಚಾರ ಮಾತನಾಡುತ್ತಿದ್ದಿರಿ ಎಂದು ಖರ್ಗೆ ನುಡಿದರು.

Next Story

RELATED STORIES