Top

ಟೀಂ ಇಂಡಿಯಾ ವಿರುದ್ಧ ಹೊನಲು ಬೆಳಕಿನ ಟೆಸ್ಟ್​ ರದ್ದು

ಅಡಿಲೇಡ್​: ಅಡಿಲೇಡ್​ನಲ್ಲಿ ಹೊನಲು ಬೆಳಕಿನ ಟೆಸ್ಟ್ ಆಡಲು ಬಿಸಿಸಿಐ ನಿರಾಕರಿಸಿದ ಹಿನ್ನೆಲೆಯಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾ ಈ ಹಿಂದಿನಂತೆ ಟೆಸ್ಟ್ ಆಡಲು ನಿರ್ಧರಿಸುವುದಾಗಿ ಹೇಳಿದೆ.

ಮುಂಬರುವ ಡಿಸೆಂಬರ್​ 6ರಿಂದ 10ರವರೆಗೆ ಅಡಿಲೇಡ್​ನಲ್ಲಿ ಪಿಂಕ್​ ಚೆಂಡಿನಲ್ಲಿ ಟೆಸ್ಟ್​ ಆಡಿಸಲು ಕ್ರಿಕೆಟ್​ ಆಸ್ಟ್ರೇಲಿಯಾ ನಿರ್ಧರಿಸಿತ್ತು. ಪಿಂಕ್​ ಚೆಂಡಿನಲ್ಲಿ ಟೀಂ ಇಂಡಿಯಾ ಇದುವರೆಗೂ ಆಡಿಲ್ಲ. ಹೀಗಾಗಿ ಆತಿಥೇಯರ ವಿರುದ್ಧ ಸೋಲುವ ಭೀತಿ ಎದುರಾಗಿದ್ದರಿಂದ ಬಿಸಿಸಿಐ ಪಿಂಕ್​ ಚೆಂಡಿನಲ್ಲಿ ಆಡಲು ನಿರಾಕರಿಸಿತು ಎಂದು ತಿಳಿದು ಬಂದಿದೆ.

ಟೆಸ್ಟ್​ ಕ್ರಿಕೆಟ್​ನ್ನ ಅಭಿವೃದ್ಧಿ ಪಡಿಸುವುದಕ್ಕಾಗಿ ಕ್ರಿಕೆಟ್​ ಆಸ್ಟ್ರೇಲಿಯಾ ಒಂದು ಹೊನಲು ಬೆಳಕಿನ ಟೆಸ್ಟ್ ಪಂದ್ಯವನ್ನ ಆಡಿಸಲು ನಿರ್ಧರಿಸಿದೆ.

Next Story

RELATED STORIES