Top

ಕ್ಯಾಬಿನೇಟ್ ಮೊದಲ ಸಭೆಯಲ್ಲಿ ಸಾಲಮನ್ನಾ : ಬಿ.ಎಸ್.ಯಡಿಯೂರಪ್ಪ ಹೇಳಿಕೆ

ಹಾವೇರಿ : ದಿನಕ್ಕೆ ಏಳೆಂಟು ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈ ಗೋಳುತ್ತೆನೆ. ಪ್ರತಿ ಕ್ಷೇತ್ರದಲ್ಲೂ ಹತ್ತರಿಂದ ಇಪ್ಪತ್ತು ಸಾವಿರ ಜನ ಸೇರ್ತಿದ್ದಾರೆ. ಅಲ್ಲದೇ ಇದೇ ಮೇ 17ರಂದು ಪ್ರಮಾಣ ವಚನ ಸ್ವೀಕಾರ ಮಾಡ್ತೀನಿ ರಾಜ್ಯದಲ್ಲಿ ಬಿಜೆಪಿ ಪ್ರಬಲವಾಗಿದೆ. ಎಲ್ಲರೂ ಒಂದಾಗಿ, ಒಟ್ಟಾಗಿ ಕೆಲಸ ಮಾಡ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಹಾವೇರಿಯಲ್ಲಿ ಚುನಾವಣಾ ಪ್ರಚಾರಕ್ಕೂ ಮುನ್ನಾ ಮಾಧ್ಯಮದವ ಜೊತೆಗೆ ಮಾತನಾಡಿ ಯಡಿಯೂರಪ್ಪ, ಪ್ರಧಾನಿ ಮೋದಿಯವರ ನಿರಂತರ ಪ್ರವಾಸ, ಅಮೀತ್ ಷಾ ಅವರ ವಾಸ್ತವ್ಯ ನಮಗೆ ಅನುಕೂಲವಾಗಿದೆ. ಕ್ಯಾಬಿನೇಟ್ ಮೊದಲ ಸಭೆಯಲ್ಲಿ ಸಾಲಮನ್ನಾ ಬಗ್ಗೆ ನಿರ್ಧಾರ ಕೈಗೊಳ್ಳುವೆ ಎಂದು ತಿಳಿಸಿದರು.

ಮೇ 17 ನನಗೆ ಒಳ್ಳೆಯ ದಿವಸ ಆವತ್ತೆ ಪ್ರಮಾಣ ವಚನ ಸ್ವೀಕಾರ ಮಾಡುವೆ. ಇನ್ನೂ ಜೆಡಿಎಸ್ ಇಪ್ಪತ್ತು ಸೀಟ್ ಗೆಲ್ಲಲ್ಲ ಅವರ ಬಗ್ಗೆ ಮಾತನಾಡೋದಿಲ್ಲ. ಮಾನನಷ್ಟ ದಂಡಹಾಕುವರಿಗೆ ಮಾನ ಮರ್ಯಾದೆ ಇಲ್ಲದಿರೋರ ಬಗ್ಗೆ ಮಾನನಷ್ಟ ಎಲ್ಲಿಂದ ಬಂತು. ಮೇ 15ರ ನಂತರ ಮಾನ ಮಾನನಷ್ಟ ನಿರ್ಧಾರ ಆಗುತ್ತೆ ಎಂದು ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

Next Story

RELATED STORIES