Top

ಕಣದಲ್ಲಿರುವ 254 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್​ ಕೇಸು

ಕರ್ನಾಟಕ ವಿಧಾನಸಭಾ ಚುನಾವಣೆಯ 224 ಕ್ಷೇತ್ರಗಳಲ್ಲಿ 2560 ಅಭ್ಯರ್ಥಿಗಳು ಕಣದಲ್ಲಿದ್ದು, ಇದರಲ್ಲಿ 254 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್ ) ಸಂಸ್ಥೆ ಈ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದು, ಆನಂದ್ ಸಿಂಗ್ ಅತೀ ಹೆಚ್ಚು (16) ಕ್ರಿಮಿನಲ್​ ಪ್ರಕರಣಗಳನ್ನು ಎದುರಿಸುತ್ತಿರುವ ಅಭ್ಯರ್ಥಿಯಾಗಿದ್ದಾರೆ. ಗಾಂಧಿನಗರದ ಪಕ್ಷೇತರ ಅಭ್ಯರ್ಥಿ ವಿ. ನಾಗರಾಜು ಹಾಗೂ ಬಳ್ಳಾರಿಯ ಕಾಂಗ್ರೆಸ್​ ಅಭ್ಯರ್ಥಿ ನಾಗೇಂದ್ರ ತಲಾ 15 ಪ್ರಕರಣಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಬಿಜೆಪಿಯ ಸಿಎಂ ಅಭ್ಯರ್ಥಿ ಬಿ.ಎಸ್​. ಯಡಿಯೂರಪ್ಪ ವಿರುದ್ಧ ... ಕೆ.ಎಸ್.ಈಶ್ವರಪ್ಪ ವಿರುದ್ಧ 5, ಜೆಡಿಎಸ್​ ಮುಖ್ಯಮಂತ್ರಿ ಅಭ್ಯರ್ಥಿ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ 8 ಹಾಗೂ ಕಾಂಗ್ರೆಸ್​ನ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ 5 ಕ್ರಿಮಿನಲ್ ಪ್ರಕರಣಗಳು ಇವೆ.

  • 4 ಅಭ್ಯರ್ಥಿಗಳ ವಿರುದ್ಧ ಐಪಿಸಿ 302(ಕೊಲೆ) ಪ್ರಕರಣ
  • 25 ಅಭ್ಯರ್ಥಿಗಳ ವಿರುದ್ಧ ಕೊಲೆ ಸಂಚು(ಐಪಿಸಿ ಸೆಕ್ಷನ್ 307) ಆರೋಪ
  • 23 ಅಭ್ಯರ್ಥಿಗಳ ವಿರುದ್ಧ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ
  • ಶೇಕಡಾವಾರು ಪ್ರಕರಣಗಳು
  • ಬಿಜೆಪಿ 37% (83 ಅಭ್ಯರ್ಥಿಗಳು)
  • ಕಾಂಗ್ರೆಸ್ 27% (59 ಅಭ್ಯರ್ಥಿಗಳು)
  • ಜೆಡಿಎಸ್ 21% (41 ಅಭ್ಯರ್ಥಿಗಳು)
  • ಜೆಡಿಯು 20% (5 ಅಭ್ಯರ್ಥಿಗಳು)
  • ಎಎಪಿ 19% (5 ಅಭ್ಯರ್ಥಿಗಳು)
  • ಪಕ್ಷೇತರರು 1090 (108 ಅಭ್ದರ್ಥಿಗಳು)

Next Story

RELATED STORIES