Top

ಉತ್ತರಾಖಂಡ್​ನಲ್ಲಿ ಹವಮಾನ ವೈಪರಿತ್ಯ: ಕೇದಾರನಾಥದಲ್ಲಿ ಸಿಲುಕಿದ ಮಾಜಿ ಸಿಎಂ

ಉತ್ತರಾಖಂಡ್​ನಲ್ಲಿ ಭಾರೀ ಇಬ್ಬನಿ ಹಾಗೂ ಗಾಳಿ ಬೀಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಕೇದಾರನಾಥ್​ನಲ್ಲಿ ಸಿಲುಕಿದ್ದಾರೆ.

ಹವಾಮಾನ ಇಲಾಖೆ ಉತ್ತರ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಚಂಡಮಾರುತ ಹಾಗೂ ಮಳೆಯ ಮುನ್ಸೂಚನೆ ನೀಡಿತ್ತು. ಇದೇ ವೇಳೆ ಹರೀಶ್ ರಾವತ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಕೇದಾರನಾಥ ಸೇರಿದಂತೆ ಹಲವು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು.

ಹವಾಮಾನ ವೈಪರಿತ್ಯದಿಂದ ಹೆಲಿಕಾಫ್ಟರ್ ಹಾರಾಟ ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಮುಖಂಡರು ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Next Story

RELATED STORIES