Top

ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಯ್ಕೆ

ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಯ್ಕೆ
X

ಸಿಡ್ನಿ : ಟಿಮ್​ ಪೇನ್ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂದು ತಂಡದ ನೂತನ ಕೋಚ್​ ಜಸ್ಟನ್​ ಲ್ಯಾಂಗರ್​ ತಿಳಿಸಿದ್ದಾರೆ. ಇದರೊಂದಿಗೆ ಚೆಂಡು ವಿರೂಪ ಪ್ರಕರಣ ನಡೆದ ನಂತರ ಇದೀಗ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ ನವ ಯುಗ ಆರಂಭವಾಗಿದೆ. 33 ವರ್ಷದ ವಿಕೆಟ್​ ಕೀಪರ್​ ಟಿಮ್​ ಪೇನ್ ಕೆಲವು ದಿನಗಳ ಹಿಂದೆಯಷ್ಟೆ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿತ್ತು.

ಚೆಂಡು ವಿರೂಪ ಪ್ರಕರಣದಿಂದ ಭಾರೀ ಮುಖಭಂಗಕ್ಕೆ ಗುರಿಯಾಗಿದ್ದ ಕ್ರಿಕೆಟ್​ ಆಸ್ಟ್ರೇಲಿಯಾ ತನ್ನ ಹಳೆ ಪ್ರತಿಷ್ಠೆಯನ್ನ ಮರಳಿ ಪಡೆಯಲು ಮಾಜಿ ಆಟಗಾರ ಜಸ್ಟಿನ್​ ಲ್ಯಾಂಗರ್​ ಅವರನ್ನ ನೇಮಿಸಿತ್ತು. ಇದೀಗ ಜಸ್ಟಿನ್​ ಲ್ಯಾಂಗರ್​ ತಂಡದ ಯಶಸ್ಸಿಗಾಗಿ ಕೆಲಸ ಮಾಡುತ್ತಿದ್ದು ಟಿಮ್​ ಪೇನ್​ ಅವರನ್ನ ನಾಯಕನಾಗಿ ಆಯ್ಕೆ ಮಾಡಿದ್ದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.

Next Story

RELATED STORIES