ಆರ್ ಸಿಬಿಗೆ ವಿರೋಚಿತ ಸೋಲು: ಟೂರ್ನಿಯಿಂದ ಹೊರಬಿದ್ದ ವಿರಾಟ್ ಪಡೆ
ಹೈದ್ರಾಬಾದ್: ಪೇಸರ್ ಭುವನೇಶ್ವರ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆರ್ಸಿಬಿ ಆತಿಥೇಯ ಸನ್ರೈಸರ್ಸ್ ವಿರುದ್ಧ ಐದು ರನ್ಗಳ ವಿರೋಚಿತ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್ಸಿಬಿಗೆ ತಂಡದ ಬೌಲರ್ಗಳ ಅಮೋಘ ಪ್ರದರ್ಶನದಿಂದ ನಿಗದಿತ ಓವರ್ನಲ್ಲಿ ಸನ್ರೈಸರ್ಸ್ ತಂಡವನ್ನ 140ರನ್ಗಳಿಗೆ ಆಲೌಟ್ ಮಾಡಿತು.ಸನ್ರೈಸರ್ಸ್ ಪರ ನಾಯಕನ ಆಟವಾಡಿದ ಕೇನ್ ವಿಲಿಯಮ್ಸನ್ 56, ಶಕೀಬ್ ಅಲ್ ಹಸನ್ 35, ಯೂಸೆಫ್ ಪಠಾಣ್ 12 ರನ್ ಬಾರಿಸಿದ್ರು. ಆರ್ಸಿಬಿ ಪರ ಟಿಮ್ ಸೌಥಿ ಮತ್ತು ಮೊಹ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದ್ರು. 145 ರನ್ಗಳ ಸುಲಬ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ತಂಡಕ್ಕೆ ಪಾರ್ತಿವ್ ಪಟೇಲ್ ಮತ್ತು ಮನ್ನ್ ವೋಹ್ರಾ ಉತ್ತಮ ಅರಂಭ ನೀಡಿದ್ರು. ಅದರೆ ನಂತರ ಬಂದ ವಿರಾಟ್ ಕೊಹ್ಲಿ 39, ಎಬಿಡಿ ವಿಲಿಯರ್ಸ್ 5, ಮೊಯಿನ್ ಅಲಿ 10, ಕಾಲಿನ್ ಡಿ ಗ್ರಾಂಡ್ ಹೋಮ್ ಅಜೇಯ 33 ರನ್ ಗಳಿಸಿದ್ರು ಕೊನೆಯಲ್ಲಿ ಅರ್ಸಿಬಿ ನಿಗದಿತ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ 5 ರನ್ಗಳ ಸೋಲು ಅನುಭವಿಸಿತು.