Top

ಅಣ್ಣಾವ್ರನ್ನ ಕನ್ನಡಿಗರಿಗೆ ಪರಿಚಯಿಸಿದ ‘ಬೇಡರ ಕಣ್ಣಪ್ಪ’ನಿಗೆ 64ರ ಸಂಭ್ರಮ

ಅಣ್ಣಾವ್ರನ್ನ ಕನ್ನಡಿಗರಿಗೆ ಪರಿಚಯಿಸಿದ ‘ಬೇಡರ ಕಣ್ಣಪ್ಪ’ನಿಗೆ 64ರ ಸಂಭ್ರಮ
X

ನಟಸಾರ್ವಭೌಮ ಡಾ. ರಾಜ್​ಕುಮಾರ್. ಕನ್ನಡಿಗರು ಕಂಡ ಬಂಗಾರದ ಮನುಷ್ಯ. ಕನ್ನಡ ಚಿತ್ರರಂಗದ ಮೇರುನಟ ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಎಲ್ಲರ ಮನೆ-ಮನಗಳ ಸಿಂಹಾಸನದಲ್ಲಿ ನೆಲೆಸಿದ್ದಾರೆ. ಇಂತಹ ಅಪರೂಪದ ನಟನನ್ನ ಕನ್ನಡಿಗರಿಗೆ ಪರಿಚಯಿಸಿದ ಸಿನಿಮಾ 1954ರಲ್ಲಿ ಬಂದ ಬೇಡರ ಕಣ್ಣಪ್ಪ. ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ, ಚಿತ್ರರಸಿಕರು ಎಂದೂ ಮರೆಯದ ಸಿನಿಮಾ ಇದು.

ಹೆಚ್​. ಎಲ್. ಎನ್ ಸಿಂಹ ನಿರ್ದೇಶನದಲ್ಲಿ ರಾಜ್​ಕುಮಾರ್, ಪಂಡರಿ ಬಾಯ್, ನರಸಿಂಹ ರಾಜುರಂತಹ ದಿಗ್ಗಜ ಕಲಾವಿದರು ನಟಿಸಿದ ಸಿನಿಮಾ ಬೇಡರ ಕಣ್ಣಪ್ಪ. ಅದಾಗಲೇ ನಾಟಕಗಳಲ್ಲಿ ನಟಿಸುತ್ತಿದ್ದ ಮುತ್ತುರಾಜ್​​, ಈ ಚಿತ್ರದ ಮೂಲಕ ರಾಜ್​ಕುಮಾರ್ ಅಂತ ಹೆಸರು ಬದಲಿಸಿಕೊಂಡು ನಾಯಕನಟರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಮೇ 7. 1954ರಲ್ಲಿ ಸುಮಾರು 20 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬೇಡರ ಕಣ್ಣಪ್ಪ ಚಿತ್ರ ಬಾಕ್ಸಾಫೀಸ್​ನಲ್ಲಿ ಸದ್ದು ಮಾಡಿದ್ದಲ್ಲದೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡು ಸಂಚಲನ ಸೃಷ್ಟಿಸಿತು.

1953ರ ಆಗಸ್ಟ್​​ನಲ್ಲಿ ಚಿತ್ರೀಕರಣ ಆರಂಭಿಸಿದ ಬೇಡರ ಕಣ್ಣಪ್ಪ ಚಿತ್ರ, ಸುಮಾರು 6 ತಿಂಗಳ ನಂತ್ರ ತೆರೆಗೆ ಬಂದಿತ್ತು. ತಿಂಗಳಿಗೆ 300 ರೂಪಾಯಿಯಂತೆ ಈ ಚಿತ್ರದ ಅಭಿನಯಕ್ಕಾಗಿ ರಾಜ್​ಕುಮಾರ್ 1800 ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ದಿಣ್ಣ ಮತ್ತು ಕಣ್ಣಪ್ಪ ಹೀಗೆ ಎರಡೂ ಶೇಡ್​ಗಳ ಪಾತ್ರದಲ್ಲಿ ಅಣ್ಣಾವ್ರು ಮ್ಯಾಜಿಕ್ ಮಾಡಿದ್ದರು. ಮೊದಲ ಚಿತ್ರವೇ ಅವ್ರಿಗೆ ಬಿಗ್ ಬ್ರೇಕ್ ನೀಡಿತು. ಅಲ್ಲಿಂದ ಮುಂದೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಕಣ್ಣಪ್ಪನ ಪಾತ್ರದಲ್ಲಿ ರಾಜ್ ಪರಕಾಯ ಪ್ರವೇಶ ಮಾಡಿದ್ದರು.

ಎ. ವಿ ಮೇಯಪ್ಪನ್, ಸಿ.ಆರ್ ಬಸವರಾಜು, ಗುಬ್ಬಿ ವೀರಣ್ಣ ಬೇಡರ ಕಣ್ಣಪ್ಪ ಚಿತ್ರಕ್ಕೆರ ಬಂಡವಾಳ ಹೂಡಿದ್ದರು. ಆರ್ . ಸುದರ್ಶನಮ್ ಸಂಗೀತ, ಎಸ್. ನಂಜಪ್ಪ ಸಾಹಿತ್ಯ, ಸಿ.ಎಸ್ ಜಯರಾಮ್, ಪಿ. ಸುಶೀಲ, ಟಿ.ಎಸ್ ಭಗವತಿ ಹಿನ್ನೆಲೆ ಗಾಯನದ ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್. ಅದ್ರಲ್ಲೂ ಶಿವಪ್ಪ ಕಾಯೋ ತಂದೆ ಕನ್ನಡ ದ ಎವರ್​ಗ್ರೀನ್ ಸಾಂಗ್.

Next Story

RELATED STORIES