Top

ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಭರ್ಜರಿ ಜಯ

ಇಂದೋರ್: ಯುವ ಬೌಲರ್ ಮುಜೀಬ್ ಉರ್ ರೆಹಮಾನ್ ಮಾರಕ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್ ವಿರುದ್ಧ ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್ 6 ವಿಕೆಟ್‍ಗಳ ಭರ್ಜರಿ ಗೆಲವು ಪಡೆಯಿತು. ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ತಂಡದ ನಾಯಕ ಆರ್.ಅಶ್ವಿನ್ ಫೀಲ್ಡಿಂಗ್ ಆಯ್ದುಕೊಂಡರು. ಆಫ್ಘಾನ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ದಾಳಿಗೆ ತತ್ತರಿಸಿದ ರಾಜಸ್ಥಾನ ತಂಡ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ತಂಡದ ಪರ ಆರಂಭಿಕ ಬ್ಯಾಟ್ಸ್‍ಮನ್ ಜೊಸ್ ಬಟ್ಲರ್ 51, ಸಂಜು ಸಮ್ಸನ್ 28 ಮತ್ತು ಎಸ್. ಗೋಪಾಲ್ 24 ರನ್ ಬಾರಿಸಿದ್ರು. ಮುಜಿಬ್ ಉರ್ ರೆಹಮಾನ್ 27 ರನ್ ನೀಡಿ 3 ವಿಕೆಟ್ ಪಡೆದ್ರು. 155 ಸವಾಲಿನ ರನ್ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕೆ.ಎಲ್. ರಾಹುಲ್ ಅಜೇಯ 84, ಕರುಣ್ ನಾಯರ್ 31 ಮತ್ತು ಸ್ಟೋಯ್ನಿಸ್ ಅಜೇಯ 23 ರನ್‍ ಬಾರಿಸಿದರು. 18.4 ಒವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 155 ರನ್ ಪೇರಿಸಿ ಗೆಲುವಿನ ದಡ ಸೇರಿತು. ರಾಜಸ್ಥಾನ ತಂಡ ಡೊಲಾಯಮಾನ ಸ್ಥಿತಿಯಲ್ಲಿದ್ದು ಪ್ಲೇ ಆಫ್‍ಗೆ ಹೋಗುವುದು ಅನುಮಾನದಿಂದ ಕೂಡಿದೆ.

Next Story

RELATED STORIES