ಹುಟ್ಟುಹಬ್ಬದ ಸಂಭ್ರಮದಲ್ಲಿ ಅಣ್ಣಾವ್ರ ಮೊಮ್ಮಗ

ನಟಸಾರ್ವಭೌಮ ಡಾ. ರಾಜ್ಕುಮಾರ್ ಮೊಮ್ಮಗ, ಸ್ಯಾಂಡಲ್ವುಡ್ನ ರಾಯಲ್ ಸ್ಟಾರ್ ವಿನಯ್ ರಾಜ್ಕುಮಾರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 29ನೇ ವರ್ಷಕ್ಕೆ ಕಾಲಿಟ್ಟಿರೋ ನಟ ವಿನಯ್ರಾಜ್ಕುಮಾರ್, ಈ ಬಾರಿ ಹುಟ್ಟುಹಬ್ಬವನ್ನ ಕುಟುಂಬದವ್ರು, ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ಸರಳವಾಗಿ ಆಚರಿಸಿಕೊಂಡರು. ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಸದಾಶಿವನಗರದ ಮನೆಯಲ್ಲಿ ಎಲ್ಲರ ಜೊತೆ ಕೇಕ್ ಕ್ತತರಿಸಿ ಸಂಭ್ರಮಿಸಿದರು ವಿನಯ್.
ಸದ್ಯ ‘ಅನಂತು ವರ್ಸಸ್ ನುಸ್ರತ್’ ಚಿತ್ರದಲ್ಲಿ ಬ್ಯುಸಿಯಾಗಿರೋ ವಿನಯ್, ಇದಾದ ನಂತರ ‘ಅಪ್ಪ ಅಮ್ಮ ಪ್ರೀತಿ’ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಬಾರಿ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಅನಂತು ವರ್ಸಸ್ ನುಸ್ರತ್ ಚಿತ್ರವನ್ನ ಉಡುಗೊರೆಯಾಗಿ ನೀಡಲಿದ್ದಾರಂತೆ.
ಕನ್ನಡ ಚಿತ್ರರಂಗದ ದೊಡ್ಮನೆಯ ಮೂರನೇ ತಲೆಮಾರಿನ ಕುಡಿಯಾದ ವಿನಯ್, ಎರಡು ಸಿನಿಮಾಗಳಿಗೆ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸೋ ಯೋಜನೆಯಲ್ಲಿರೋ ವಿನಯ್, ಮುಂದಿನ ದಿನಗಳಲ್ಲಿ ಈ ಸಕ್ಸಸ್ ಜರ್ನಿಯನ್ನ ಹೀಗೆ ಮುಂದುವರೆಸಲಿ ಅನ್ನೋದೇ ಕನ್ನಡ ಕಲಾಭಿಮಾನಿಗಳ ಆಶಯ.