Top

ಸೋನಂ ಮದುವೆಗೆ ಭರ್ಜರಿ ತಯಾರಿ: ಮುಂಬೈನಲ್ಲಿ ರಂಗೇರಿದ ಮೆಹಂದಿ ಫಂಕ್ಷನ್

ಸೋನಂ ಮದುವೆಗೆ ಭರ್ಜರಿ ತಯಾರಿ: ಮುಂಬೈನಲ್ಲಿ ರಂಗೇರಿದ ಮೆಹಂದಿ ಫಂಕ್ಷನ್
X

ಅನಿಲ್ ಕಪೂರ್ ಪುತ್ರಿ, ಬಾಲಿವುಡ್​​ ನಟಿ ಸೋನಂ ಕಪೂರ್ ಮತ್ತು ಆಕೆಯ ಗೆಳೆಯ ಆನಂದ್ ಅಹುಜಾ ನಾಳೆ(ಮೇ 8) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೆಹಂದಿ ಕಾರ್ಯಕ್ರಮದ ಮೂಲಕ ಸೋನಮ್ ಮದುವೆ ಸಮಾರಂಭ ಶುರುವಾಗ್ತಿದ್ದು, ಬಿಟೌನ್​​ ಸೆಲೆಬ್ರೆಟಿಗಳು ಕಪೂರ್​ ಮನೆಯ ಮದುವೆ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಮೆಹಂದಿ ಕಾರ್ಯಕ್ರಮದ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.

ನಿರ್ದೇಶಕ ಕರಣ್ ಜೋಹರ್, ನಟ ವಿದ್ವುತ್ ಜಮ್ವಾಲ್, ಅರ್ಜುನ್ ಕಪೂರ್, ರಾಣಿ ಮುಖರ್ಜಿ , ಶ್ರೀದೇವಿ ಪುತ್ರಿಯರಾದ ಜಾಹ್ನವಿ ಕಪೂರ್, ಖುಷಿ ಕಪೂರ್ ಸೇರಿದಂತೆ ಬಾಲಿವುಡ್​​ನ ಸಾಕಷ್ಟು ಕಲಾವಿದರು ಸೋನಂ, ಆನಂದ್ ಅಹುಜಾ ಮೆಹಂದಿ ಮತ್ತು ಸಂಗೀತ್ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ.

ಸೋನಂ, ಆನಂದ್ ಅಹುಜಾ ಪ್ರೀತಿಯಲ್ಲಿ ಮುಳುಗಿದ್ದಾರೆ ಅನ್ನೋ ಮಾತುಗಳು ಬಾಲಿವುಡ್​ನಲ್ಲಿ ಕೇಳಿಬರ್ತಿತ್ತು. ಇತ್ತೀಚೆಗಷ್ಟೆ ಇಬ್ಬರ ಪೋಷಕರು ಮದುವೆಯಾಗೋ ವಿಚಾರ ಬಹಿರಂಗ ಪಡಿಸಿದ್ದರು. ಮುಂಬೈನಲ್ಲಿ ನಾಳೆ(ಮೇ 8) ಬೆಳಿಗ್ಗೆ 11:00 ಗಂಟೆಯಿಂದ 12:30ರ ನಡುವಿನ ಶುಭಲಗ್ನದಲ್ಲಿ ವಿವಾಹ ಜರುಗಲಿದೆ. ಸಂಜೆ ಆತ್ಮೀಯರು ಮತ್ತು ಬಾಲಿವುಡ್ ಗಣ್ಯರಿಗೆಂದೇ ವೆಡ್ಡಿಂಗ್ ಪಾರ್ಟಿ ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕೋಕ್ಕೆ ಬಾಲಿವುಡ್ ಸ್ಟಾರ್ಸ್ ರಿಹರ್ಸಲ್ ಮಾಡಿಕೊಂಡಿದ್ದಾರೆ.

Next Story

RELATED STORIES