Top

ಮೈತ್ರಿ ಸುಳಿವು ನೀಡಿದ ಕುಮಾರಸ್ವಾಮಿ

ಯಾರ ಜೊತೆಗೂ ಮೈತ್ರಿ ಇಲ್ಲವೆಂದು ಹೇಳುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಯೂಟರ್ನ್ ಹೊಡೆದ್ರಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. 113 ಸ್ಥಾನ ಗೆಲ್ಲುವ ಸಂಪೂರ್ಣ ವಿಶ್ವಾಸ ನನಗಿದೆ ಎಂದಿದ್ದ ಹೆಚ್ಡಿಕೆ, ನನ್ನ ಬೆಂಬಲವಿಲ್ಲದೇ ಸರ್ಕಾರ ರಚಿಸಲು ಸಾಧ್ಯವಿಲ್ಲ ಎನ್ನುವ ಮೂಲಕ, ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ. ಎಲ್ಲ ಮಾಧ್ಯಮಗಳು ಸಮೀಕ್ಷೆಯಲ್ಲಿ ಜೆಡಿಎಸ್ 30-35ಕ್ಕೆ ಸೀಮಿತ ಎಂದು ಹೇಳಿದೆ. ಮಾಧ್ಯಮಗಳ ಲೆಕ್ಕಾಚಾರ ಪರಿಗಣಿಸಿದರೂ ನಮ್ಮ ಬೆಂಬಲ ಇಲ್ಲದೇ ಸರ್ಕಾರ ರಚನೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮೈತ್ರಿಯಾಗುವ ಸಂದರ್ಭ ಬಂದರೆ ರಾಜ್ಯದ ಜನರ ಒಳಿತಿಗೆ ನಮ್ಮ ಯೋಜನೆಗಳನ್ನು ಅನುಷ್ಠಾನ ಮಾಡುವ ಪಕ್ಷದ ಜೊತೆಗೆ ಮಾತುಕತೆಗೆ ಸಿದ್ಧ ಎಂದಿದ್ದಾರೆ ಹೆಚ್ಡಿಕೆ .

Next Story

RELATED STORIES