Top

‘ಮಹಾನಟಿ’ ಮೇಲೆ ನೆಟ್ಟಿದೆ ಟಾಲಿವುಡ್​​​ ಪ್ರೇಕ್ಷಕರ ಕಣ್ಣು..!

‘ಮಹಾನಟಿ’ ಮೇಲೆ ನೆಟ್ಟಿದೆ ಟಾಲಿವುಡ್​​​ ಪ್ರೇಕ್ಷಕರ ಕಣ್ಣು..!
X

ಕಪ್ಪು ಬಿಳುಪಿನ ಕಾಲದ ಟಾಪ್​ ಹೀರೋಯಿನ್ ಸಾವಿತ್ರಿ ಜೀವನಾಧರಿತ ಮಹಾನಟಿ ತೆಲುಗು ಸಿನಿಮಾ ರಿಲೀಸ್​ಗೆ ಒಂದು ದಿನ ಅಷ್ಟೆ ಬಾಕಿಯಿದೆ. ನಾಗ್ ಅಶ್ವಿನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಮಲಯಾಳಿ ನಟಿ ಕೀರ್ತಿ ಸುರೇಶ್, ನಟಿ ಸಾವಿತ್ರಿ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೆಮಿನಿ ಗಣೇಶ್, ಎನ್​ಟಿಆರ್, ಎಎನ್​ಆರ್, ಎಂಜಿಆರ್, ರಾಜ್​ಕುಮಾರ್​ರಂತಹ ಘಟಾನುಘಟಿ ಕಲಾವಿದರ ಜೊತೆ ನಟಿಸಿ, ಗೆದ್ದ ನಟಿ ಸಾವಿತ್ರಿಯ ಲೈಫ್​ ಸ್ಟೋರಿ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಇದೆ.

ಅಪರೂಪದ ಅದ್ಭುತ ಅಭಿನೇತ್ರಿ ಸಾವಿತ್ರಿ ಲೈಫ್ ಸ್ಟೋರಿ ಬುಧವಾರ(ಮೇ9) ಬೆಳ್ಳಿತೆರೆಯಲ್ಲಿ ಅನಾವರಣಗೊಳ್ಳಲಿದೆ.. ಸಾವಿತ್ರಿ ಪತಿ ಜೆಮಿನಿ ಗಣೇಶನ್ ಪಾತ್ರದಲ್ಲಿ ದುಲ್ಖರ್ ಸಲ್ಮಾನ್ ಬಣ್ಣ ಹಚ್ಚಿದ್ರೆ, ಸಮಂತಾ ಅಕ್ಕಿನೇನಿ ಮತ್ತು ವಿಜಯ್ ದೇವರಕೊಂಡ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದಾರೆ. 3 ದಶಕಗಳ ಕಾಲ ಸೌತ್ ಸಿನಿದುನಿಯಾದಲ್ಲಿ ರಾಣಿಯಾಗಿ ಮೆರೆದ ನಟಿ ಸಾವಿತ್ರಿ ಲೈಫ್ ಸ್ಟೋರಿ ನಿಜಕ್ಕೂ ರೋಚಕ.

ತಾರಾಲೋಕದಲ್ಲಿ ಮಿಂಚಿ ಮರೆಯಾದ ಅಪರೂಪದ ನಟಿಯ ಅದೆಷ್ಟೋ ಸಂಗತಿಗಳು, ಈ ಚಿತ್ರದಲ್ಲಿ ಅನಾವರಣಗೊಳ್ಳಲಿದೆ ಅನ್ನೋ ನಿರೀಕ್ಷೆ ಇದೆ.. ಅದೇ ಕಾರಣಕ್ಕೆ ಸಾವಿತ್ರಿ ಅವರ ಅಂದಿನ ಅಭಿಮಾನಿಗಳಿಂದ ಹಿಡಿದು, ಇಂದಿನ ಪ್ರೇಕ್ಷಕರು ಕೂಡಾ ಸಿನಿಮಾ ನೋಡೋಕೆ ಕಾತರದಿಂದ ಕಾಯ್ತಿದ್ದಾರೆ.

ಖ್ಯಾತ ನಿರ್ಮಾಪಕ ಅಶ್ವಿನಿ ದತ್ ನಿರ್ಮಾಣದ ಮಹಾನಟಿ ಚಿತ್ರವನ್ನ ಎರಡು ದಿನ ಮೊದಲೇ ಅಂದ್ರೆ, ಬುಧವಾರವೇ ತೆರೆಗೆ ತರ್ತಿರೋದು ವಿಶೇಷ. ಅಶ್ವಿನಿ ದತ್ ನಿರ್ಮಾಣದ ಜಗದೇಕ ವೀರುಡು ಅತಿಲೋಕ ಸುಂದರಿ ಚಿತ್ರ ಮೇ 9ನೇ ತಾರೀಖು ತೆರೆಕಂಡು ಸೂಪರ್ ಹಿಟ್ ಆಗಿತ್ತು.. ಅದೇ ಸೆಂಟಿಮೆಂಟ್​ನಿಂದ ಮಹಾನಟಿ ಚಿತ್ರಬುಧವಾರ ರಿಲೀಸ್ ಮಾಡೋ ಲೆಕ್ಕಾಚಾರದಲ್ಲಿದೆ ಚಿತ್ರತಂಡ..

Next Story

RELATED STORIES