Top

ಬೆನ್ನು ಬಿಡದ ಕೃಷ್ಣಮೃಗ ಬೇಟೆ ಪ್ರಕರಣ: ಮತ್ತೆ ಕೋರ್ಟ್​​ಗೆ ಹಾಜರಾದ ಬ್ಯಾಡ್​ಬಾಯ್

ಬೆನ್ನು ಬಿಡದ ಕೃಷ್ಣಮೃಗ ಬೇಟೆ ಪ್ರಕರಣ: ಮತ್ತೆ ಕೋರ್ಟ್​​ಗೆ ಹಾಜರಾದ ಬ್ಯಾಡ್​ಬಾಯ್
X

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಇಂದು ಜೋಧ್​ಪುರ ನ್ಯಾಯಾಲಯಕ್ಕೆ ಹಾಜರಾಗಿದ್ದರು. 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಯನ್ನು ಪ್ರಶ್ನಿಸಿದ್ದ, ಸಲ್ಮಾನ್ ಖಾನ್ ಅರ್ಜಿಯ ವಿಚಾರಣೆಯನ್ನ ಕೋರ್ಟ್ ಜುಲೈ 17ಕ್ಕೆ ಮುಂದೂಡಿದೆ. ಖುದ್ದು ಸಲ್ಮಾನ್ ಖಾನ್ ಕೋರ್ಟ್​​ಗೆ ಹಾಜರಾಗಬೇಕಿದ್ದ ಕಾರಣ ನಿನ್ನೆಯೇ ಅವರು ಜೋಧ್​​ಪುರ್​​​ಗೆ ಬಂದು ತಂಗಿದ್ದರು.

ಹಮ್ ಸಾಥ್ ಸಾಥ್ ಹೇ ಚಿತ್ರದ ಶೂಟಿಂಗ್​ ಸಂದರ್ಭದಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಜೊತೆಗೆ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ನೀಲಂ ಕೂಡ ಆರೋಪಿಗಳಾಗಿದ್ದರು. ಏಪ್ರಿಲ್​​ 5ರಂದು ಸಲ್ಮಾನ್​ ಖಾನ್ ಗೆ 5 ವರ್ಷ ಶಿಕ್ಷೆ ವಿಧಿಸಿದ್ದ ಕೋರ್ಟ್ ಇತರೆ ಆರೋಪಿಗಳನ್ನ ಖುಲಾಸೆಗೊಳಿಸಿತ್ತು. ಜೈಲು ಪಾಲಾಗಿದ್ದ ಸಲ್ಲು, ಏಪ್ರಿಲ್ 7ರಂದು ಜಾಮೀನು ಪಡೆದು ಹೊರಬಂದಿದ್ದರು.

ಬಾಲಿವುಡ್ ನಟನಿಗೆ ಏಪ್ರಿಲ್ 7ರಂದು ಜಾಮೀನು ನೀಡಿದ್ದ ನ್ಯಾಯಾಲಯ ಆ ಸಮಯ ನೀಡಿದ್ದ ನಿರ್ದೇಶನದಂತೆ ಸಲ್ಮಾನ್ ಖಾನ್ ಇಂದು ನ್ಯಾಯಾಧೀಶರ ಮುಂದೆ ಹಾಜರಿದ್ದರು. ಪ್ರತಿವಾದಿ ವಕೀಲರು ಪ್ರಕರಣದ ಕುರಿತು ವಾದ ಮಂಡನೆಗಾಗಿ ಸಮಯ ಕೋರಿದ್ದ ಕಾರಣ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರ ಕುಮಾರ್ ಸಾಂಗರಾ ವಿಚಾರಣೆಯನ್ನು ಮುಂದೂಡಿ ಆದೇಶಿಸಿದ್ದಾರೆ.

Next Story

RELATED STORIES