Top

ಬಿಜೆಪಿ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳಿಂದ ಅಟ್ಯಾಕ್

ಬಿಜೆಪಿ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳಿಂದ ಅಟ್ಯಾಕ್
X

ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ದುಷ್ಕರ್ಮಿಗಳ ಗ್ಯಾಂಗ್​ವೊಂದು ತಡರಾತ್ರಿ ಆಟ್ಯಾಕ್​​ ಮಾಡಿ ಎಸ್ಕೇಪ್​​ ಆಗಿದೆ. ವಿಜಯನಗರ ನಿವಾಸಿಯಾಗಿರೋ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಎಂಬುವವರ ಕಾರ್​​ ಮೇಲೆ ​​ ದುಷ್ಕರ್ಮಿಗಳ ಗ್ಯಾಂಗ್​ ಅಟ್ಯಾಕ್​​ ಮಾಡಿದೆ. ಕಾರ್​​ ಮೇಲೆ ಆಟ್ಯಾಕ್​​ ಮಾಡುತ್ತಿದಂತೆಯೇ ಪೊಲೀಸರು ಎಂಟ್ರಿ ಕೊಟ್ಟ ಕಾರಣ ರಾಘವೇಂದ್ರನ ಮೇಲೆ ಹಲ್ಲೆ ಮಾಡಲು ಸಾಧ್ಯವಾಗದೇ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಎಸ್ಕೇಪ್​​ ಆಗಿದ್ದಾರೆ.​​

ತಡರಾತ್ರಿ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಕೆಲಸ ಮುಗಿಸಿ ತನ್ನ ಕಾರಿನಲ್ಲಿ ಮನೆಗೆ ತೆರಳುವ ವೇಳೆ ಮುದ್ದನಪಾಳ್ಯ ಸಮೀಪ ಏಳು ಜನರ ದುಷ್ಕರ್ಮಿಗಳ ಗ್ಯಾಂಗ್​​ ಏಕಾಏಕಿ ಮಾರಕಾಸ್ತ್ರಗಳಿಂದ ಹೊಡೆದು ರಾಘವೇಂದ್ರನ ಕಾರನ್ನು ನುಚ್ಚು ನೂರು ಮಾಡಿದ್ದಾರೆ. ನಂತರ ರಾಘವೇಂದ್ರನ ಮೇಲೆ ಹಲ್ಲೆಗೆ ಮುಂದಾದಾಗ ಘಟನಾ ಸ್ಥಳಕ್ಕೆ ಪೊಲೀಸರು ದೌಡಯಿಸಿದ್ದಾರೆ. ಈ ವೇಳೆ ಪೊಲಿಸರಿಗೆ ಹೆದರಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇನ್ನು ನಾನು ಕಾಂಗ್ರೆಸ್​​ ಬಿಟ್ಟು ಬಿಜೆಪಿ ಪಕ್ಷ ಸೇರಿದ್ದರಿಂದ ಶಾಸಕ ಪ್ರೀಯಕೃಷ್ಣ ಬೆಂಬಲಿಗರು ನನ್ನ ಮೇಲೆ ಹಲ್ಲೆಗೆ ಮುಂದಾಗಿರಬಹುದು ಎಂದು ರಾಘವೆಂದ್ರ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಸಲಾಗುತ್ತಿದೆ .

Next Story

RELATED STORIES