ಬಾಲಿವುಡ್ ನಲ್ಲಿ ಶ್ರದ್ಧಾ ಶೈನ್

ಸ್ಯಾಂಡಲ್ವುಡ್ನ ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಗೆ ಕನ್ನಡದ ಜೊತೆಜೊತೆಗೆ ಪರಭಾಷೆಯಲ್ಲೂ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುತ್ತಾ ಬ್ಯುಸಿಯಾಗಿರೋ ಶ್ರದ್ದಾ ಈಗಾಗಲೇ ತೆಲುಗು ತಮಿಳು ಮಲೆಯಾಳಂನಲ್ಲೂ ಹಿಟ್ ಸಿನಿಮಾಗಳನ್ನ ಕೊಟ್ಟು ಸೌತ್ನ ಸಿನಿದುನಿಯಾವನ್ನ ಒಂದು ಸುತ್ತು ಹಾಕಿ ಬಂದಿದ್ದಾಗಿದೆ.
ಇದೀಗ ಶ್ರದ್ಧಾ ಶ್ರೀನಾಥ್ ಬಾಲಿವುಡ್ನಲ್ಲಿ ಶೈನ್ ಆಗೋಕ್ಕೆ ರೆಡಿಯಾಗಿದ್ದಾರೆ. ಈಗಾಗ್ಲೇ ಮಿಲಾನ್ ಟಾಕೀಸ್ ಎಂಬ ಹಿಂದಿ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿರೋ ಶ್ರದ್ದಾ ಮತ್ತೊಂದು ದೊಡ್ಡ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಎಸ್ ಹಿಂದಿಯ ಟ್ಯಾಲೆಂಟೆಡ್ ಹೀರೋ ನವಾಜುದ್ದೀನ್ ಸಿದ್ದಿಖಿ ಗೆ ನಾಯಕಿಯಾಗೋ ಅವಕಾಶ ಪಡೆದುಕೊಂಡಿದ್ದಾರೆ ಶ್ರದ್ಧಾ..ಈ ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿರದೇ, ಡಿ.ಆರ್ ಶ್ರೀನಿವಾಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ವಿಶೇಷ ಅಂದ್ರೆ ಈ ಚಿತ್ರ ಹಿಂದಿಯ ಜೊತೆಗೆ ಕನ್ನಡದಲ್ಲೂ ಏಕಕಾಲಕ್ಕೆ ತೆರೆಗೆ ಬರಲಿದೆ..ಈ ಹಿಂದಿನ ಸಿನಿಮಾಗಳಿಗಿಂತ ಶ್ರದ್ಧಾ ವಿಭಿನ್ನ ಲುಕ್ ಮತ್ತು ಕ್ಯಾರೆಕ್ಟರ್ನಲ್ಲಿ ಮಿಂಚಲಿದ್ದು, ಕನ್ನಡದ ರುಸ್ತುಂ ಚಿತ್ರ ಕಂಪ್ಲೀಟ್ ಆದ ನಂತ್ರ ನವಾಜುದ್ದೀನ್ ಅಭಿನಯದ ಈ ಚಿತ್ರದಲ್ಲಿ ಪಾಲ್ಗೊಳಲ್ಲಿದ್ದೇನೆ ಅಂತ ಟಿವಿ5 ಗೆ ಹೇಳಿದ್ದಾರೆ.