Top

ಪ್ರಧಾನಿ ವಿರುದ್ಧ ಸಿಎಂ ಸಿದ್ದರಾಮಯ್ಯ ಟ್ವೀಟ್ ವಾರ್

ಪ್ರಧಾನಿ ವಿರುದ್ಧ ಸಿಎಂ ಸಿದ್ದರಾಮಯ್ಯ ಟ್ವೀಟ್ ವಾರ್
X

ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಭಾಷಣ ಮಾಡುವಾಗ ವಚನ ಹೇಳುವ ಭರದಲ್ಲಿ ತಪ್ಪುತಪ್ಪಾಗಿ ಉಚ್ಛರಿಸಿ, ಅಪಹಾಸ್ಯಕ್ಕೀಡಾಗಿದ್ದಾರೆ. ಬಸವಣ್ಣನವರ ವಚನ ಹೇಳುವಾಗ, ಕೂಡಲಸಂಗಮದೇವ ಎನ್ನುವುದನ್ನ ಕುಂಡಲ ಸಂಗಮ ಎಂದು ತಪ್ಪಾಗಿ ಉಚ್ಛರಿಸಿದ ಪ್ರಧಾನಿ ಮೋದಿಯವರಿಗೆ, ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.

ಅದು ಕೂಡಲಸಂಗಮ, ಕುಂಡಲಸಂಗಮ ಅಲ್ಲ.ಕನ್ನಡ ಶಬ್ದಗಳ ಉಚ್ಛಾರಣೆ ಬಿಗ್ ಡೀಲ್ ಮಾಡಿದಂತಲ್ಲ. ಕನ್ನಡಿಗರು ಸ್ವಾಭಿಮಾನಿಗಳು, ಅವರು ನಿಮ್ಮನ್ನು ಕ್ಷಮಿಸುತ್ತಾರೆ.ಆದ್ರೆ ನೀವು ಬೇರೆಯವರು ತಪ್ಪಾಗಿ ಉಚ್ಛರಿಸಿದಾಗ, ನಿಮ್ಮ ಭಾಷಣದಲ್ಲಿ ಅದನ್ನೇ ಪ್ರತಿಬಿಂಬಿಸಿ ಮಾತನಾಡುತ್ತೀರಿ ಎಂದು ಪ್ರಧಾನಿ ವಿರುದ್ಧ ಸಿಎಂ ಟ್ವೀಟ್ ವಾರ್ ಮಾಡಿದ್ದಾರೆ.

Next Story

RELATED STORIES