Top

ನಾನು ಯಾವ ಪಕ್ಷದ ಪರವೂ ಇಲ್ಲ, ಜನರ ಪರ ಇದ್ದೇನೆ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರಿನ ಜೆ.ಪಿ.ಭವನದಲ್ಲಿಂದು ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮೇಲ್ಮನೆ ಸದಸ್ಯರಾದ ಟಿ.ಎಂ.ಶರವಣ, ಚೌಡರೆಡ್ಡಿ ತೂಪಲ್ಲಿ, ರಮೇಶ್ ಬಾಬು, ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಬಿ.ಎಂ.ಫಾರೂಕ್ ಉಪಸ್ಥಿತರಿದ್ದರು. ಇನ್ನು ಜೆಡಿಎಸ್ 60 ಪುಟಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಜನತಾ ಪ್ರಣಾಳಿಕೆ.....ಜನರದ್ದೇ ಆಳ್ವಿಕೆ ಎಂಬ ವಾಕ್ಯದೊಂದಿಗೆ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಜೆಡಿಎಸ್ ಚುನಾವಣೆ ಪ್ರಣಾಳಿಕೆ ಪ್ರಮುಖಾಂಶಗಳು ಇಂತಿವೆ.

 • ರೈತರ ಸಂಪೂರ್ಣ ಸಾಲಮನ್ನಾ.
 • ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ವಿದ್ಯುತ್.
 • ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಉಚಿತ.
 • ಇಸ್ರೇಲ್ ಮಾದರಿ ಕೃಷಿ ಪದ್ದತಿ ಅಳವಡಿಕೆ.
 • ಸ್ತ್ರೀಶಕ್ತಿ ಸ್ವಸಾಯ ಸಂಘಗಳ ಸಾಲ ಮನ್ನಾ.
 • ಗರ್ಭಿಣಿಯರಿಗೆ 6 ತಿಂಗಳಿನಿಂದ 12 ತಿಂಗಳವರೆಗೂ ಪ್ರತಿ ತಿಂಗಳು 6000 ರೂ ಧನಸಹಾಯ.
 • ವಿಕಲಚೇತನರಿಗೆ ತಿಂಗಳಿಗೆ 2000 ಸಹಾಯಧನ.
 • 70 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮಾಸಿಕ 5000 ರೂ.
 • ಪ್ರತಿ ತಿಂಗಳು ವಿಧಾನಸೌಧದದಲ್ಲಿ ರೈತರ ಸಭೆ.
 • ವಿಧವವೇತನ ಮಾಸಿಕ 2000 ರೂ.
 • ವಿಕಲಚೇತರನ್ನು ಮದುವೆ ಯಾದರೆ 50 ಸಾವಿರದಿಂದ 1 ಲಕ್ಷದವರೆಗೆ ಸಹಾಯಧನ
 • ಹಳ್ಳಿಗಳ ಅವಿದ್ಯಾವಂತ ಯುವಕ, ಯುವತಿಯರಿಗೆ ಸಸಿ ನೆಡುವ ಕೆಲಸ ನೀಡಿ ಮಾಸಿಕ 5000 ರೂ ಗೌರವಧನ.
 • ವಯೋವೃದ್ಧರಿಗೆ ಉಚಿತ ಬಸ್ ಪಾಸ್.
 • ಬಿಪಿಎಲ್ ಕಾರ್ಡ್ ದಾರರಿಗೆ 30 ಕೆಜಿ ಅಕ್ಕಿ.
 • ರೈತರ ಬೆಳೆಗೆ ಬೆಂಬಲ ಬೆಲೆ.
 • ಸಣ್ಣ ಟ್ರಾಕ್ಟರ್ ಖರೀದಿಗೆ ಶೇ75 ರಷ್ಟು ಹಾಗೂ ಇತರೆ ಸಲಕರಣೆ ಖರೀದಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು.
 • ಬಡ ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ಮಾಸಿಕ 2000 ರೂ.
 • ಆರ್ಯವೈಶ್ಯ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ.
 • ಉದ್ಯೋಗವಂತ ಮಹಿಳೆಯರಿಗೆ ಬೆಂಗಳೂರಿನಲ್ಲಿ ಸುಮಾರು100 ವಸತಿ ನಿಲಯಗಳ ಸ್ಥಾಪನೆ.
 • ಡಾ. ವಿಷ್ಣುವರ್ಧನ್ ಸಮಾಧಿ ಸ್ಥಳದ ವಿವಾದ ಬಗೆಹರಿಸಲಾಗುವುದು.
 • ಆಶಾ ಕಾರ್ಯಕರ್ತರ ಪ್ರೋತ್ಸಾಹ ಧನ 3500 ರಿಂದ 5000 ರೂಗೆ ಏರಿಕೆ.
 • ವಕೀಲರ ಸಂಘಕ್ಕೆ 100 ಕೋಟಿ ಅನುದಾನ ಮತ್ತು ವಕೀಲರಿಗೆ 5000 ಗೌರವಧನ
 • ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದುವರಿಕೆ.

ಇನ್ನು ಇದೇ ವೇಳೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಾನು ಬಿಜೆಪಿ ಪರವಾಗಿಯೂ ಇಲ್ಲ, ಕಾಂಗ್ರೆಸ್ ಪರವಾಗಿಯೂ ಇಲ್ಲ. ಈ ನಾಡಿನ ಜನತೆಪರ ಇದ್ದೇನೆ. ವಿಧಾನಸೌಧದ ಮೂರನೇ ಮಹಡಿ ಸ್ವಚ್ಛ ಮಾಡಬೇಕಿದೆ. ಮುಖ್ಯಮಂತ್ರಿ ಕಚೇರಿ ಸೇರಿದಂತೆ ಎಲ್ಲವೂ ಗಬ್ಬೆದ್ದುಹೋಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ನಾನು ಕಾಂಗ್ರೆಸ್ ಬಿಜೆಪಿ ಬಾಗಿಲು ತಟ್ಟಲು ಕಾದು ಕುಳಿತಿಲ್ಲ. 113ರ ಗುರಿ ಮುಟ್ಟುತ್ತೇನೆ. ನಾನು ಲೆಕ್ಕ ಮಾಡಿಯೇ ಪ್ರಚಾರಕ್ಕೆ ಹೊರಟಿದ್ದೇನೆ. ಪ್ರಣಾಳಿಕೆಯಲ್ಲಿರುವ ಅಂಶವನ್ನು ಜಾರಿಗೆ ತರುವವರ ಜೊತೆ ಮಾತನಾಡಲು ಸಿದ್ಧ ಎಂದಿದ್ದೇನೆ. ನನಗೆ ಸಿಎಂ ಆಗಬೇಕೆಂಬ ಆಸೆ ಇಲ್ಲ ಎಂದು ಹೇಳಿದ್ದಾರೆ.

Next Story

RELATED STORIES