Top

ಕೋಲಾರದಲ್ಲಿ ಸೈಕಲ್ ತುಳಿದ ರಾಹುಲ್!

ಕೋಲಾರದಲ್ಲಿ ಸೈಕಲ್ ತುಳಿದ ರಾಹುಲ್!
X

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಕೋಲಾರದಲ್ಲಿ ಪ್ರಚಾರದ ವೇಳೆ ಸೈಕಲ್ ತುಳಿದು ಗಮನ ಸೆಳೆದರು.

ಕೋಲಾರದಲ್ಲಿ ಜನತಾದರ್ಶನ ರ್ಯಾಲಿ ನಡೆಸಲು ಯೋಜಿಸಿದ್ದ ಕಾಂಗ್ರೆಸ್ ನಂತರ ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸಲು ತೀರ್ಮಾನಿಸಿತು. ಈ ವೇಳೆ ರಾಹುಲ್ ಆರಂಭದಲ್ಲಿ ಪಾದಯಾತ್ರೆ ಮಾಡಿದರೂ ನಂತರ ಸೈಕಲ್ ತುಳಿದು ಎಲ್ಲರ ಗಮನ ಸೆಳೆದರು. ನಂತರ ಕೆಲ ಸಮಯ ಎತ್ತಿನಗಾಡಿಯಲ್ಲೂ ಸವಾರಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ಮೋದಿ ಸರ್ಕಾರ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಯ ಬಗ್ಗೆ ಯಾವುದೇ ಕ್ರಮ ತೆಗೆದು ಕೊಳ್ಳುತ್ತಿಲ್ಲ. ರೈತರ ಸಾಲ ಮನ್ನಾ ಮಾಡದ ಮೋದಿ ರೈತರ ವಿರೋಧಿಯಾಗಿದೆ ಎಂದು ಆರೋಪಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಜನರ ವಿರೋಧಿಯಾಗಿದೆ. ಚುನಾವಣಾ ಸಂಘರ್ಷ ಆರ್​ಎಸ್ಎಸ್, ಮಹಾತ್ಮ ಗಾಂಧೀಜಿ ಸಿದ್ಧಾಂತ ನಡುವಿನ ಸಂಘರ್ಷವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ಜನತಾದಳದ ಮುಖ್ಯ ಮಂತ್ರಿ ಯಡಿಯೂರಪ್ಪನಾ ಎಂದು ತಿಳಿಸಲಿ ಜೆಡಿಎಸ್ ನವರು ಬಹಿರಂಗಪಡಿಸಲಿ ಎಂದು ರಾಹುಲ್ ಆಗ್ರಹಿಸಿದರು.

ದಲಿತರ ಮೇಲೆ ಅತ್ಯಾಚಾರ, ದೌರ್ಜನ್ಯಕ್ಕೆ ಮೋದಿ ಮಾನವಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ದಲ್ಲಿದ್ದಾಗ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದರು. ಸಿದ್ದರಮಯ್ಯ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಿದೆ ಎಂದು ರಾಹುಲ್ ನುಡಿದರು.

Next Story

RELATED STORIES