Top

ಎಸ್ಸೆಸ್ಸೆಲ್ಸಿ ಫಲಿತಾಂಶ: ಉಡುಪಿ ಮೊದಲು, ಉತ್ತರ ಕನ್ನಡ ದ್ವಿತೀಯ ಸ್ಥಾನ

ಪ್ರಸಕ್ತ ಸಾಲಿನ ಎಸ್ಸೆಸ್ಸಲ್ಸಿ ಪರೀಕ್ಷಾ ಫಲಿತಾಂಶ ಹೊರಬಂದಿದ್ದು, ಶೇ.71.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲಾವಾರು ಫಲಿತಾಂಶಗಳ ಪೈಕಿ ಉಡುಪಿ (ಶೇ.88.18) ಪ್ರಥಮ ಸ್ಥಾನ ಪಡೆದರೆ, ಉತ್ತರ ಕನ್ನಡ ದ್ವೀತಿಯ (ಶೇ. 88.12) ಹಾಗೂ ಚಿಕ್ಕೋಡಿ ತೃತೀಯ ಗಳಿಸಿದೆ. ಯಾದೆಗಿರಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಪ್ರಾಥಮಿಕ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ವಿವರ ಪ್ರಕಟಿಸಿದರು ಈ ಬಾರಿ 71.93ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿ 67.87ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, 78.01 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ ಬರೆದ ವಿದ್ಯಾರ್ಥಿಗಳು 8,54,424 ಪರೀಕ್ಷೆ ಬರೆದಿದ್ದು, ಗ್ರಾಮೀಣ ಪ್ರದೇಶದ ಶೇ. 74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 76.12 ಸರಕಾರಿ ಶಾಲೆಗಳು ಫಲಿತಾಂಶ ಪಡೆದಿದ್ದು, 100 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದು, 43 ಶಾಲೆಗಳು ಶೂನ್ಯ ಸಾಧನೆ ಮಾಡಿವೆ. 1342 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ.

625 ಅಂಕಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು ಪೂರ್ಣ 625 ಅಂಕ ಪಡೆದು ಅಗ್ರಸ್ಥಾನ ಪಡೆದಿದ್ದಾರೆ. 8 ವಿದ್ಯಾರ್ಥಿಗಳು 624 ಅಂಕ ಗಳಿಸಿದ್ದಾರೆ. 623 ಅಂಕಗಳನ್ನು 12 ವಿದ್ಯಾರ್ಥಿಗಳು ಪಡೆದಿದ್ದಾರೆ.

Next Story

RELATED STORIES