Top

ಸಿದ್ದರಾಮಯ್ಯ ಒಬ್ಬರೇ ಸತ್ಯಹರಿಶ್ಚಂದ್ರ, ಉಳಿದವರೆಲ್ಲಾ ಸುಳ್ಳುಗಾರರು: ಎಚ್​ಡಿಕೆ ವ್ಯಂಗ್ಯ

ಈ ಭೂಮಿ ಮೇಲೆ ಸಿದ್ದರಾಮಯ್ಯ ಒಬ್ಬರೇ ಸತ್ಯಹರಿಶ್ಚಂದ್ರರು, ಉಳಿದವರೆಲ್ಲಾ ಸುಳ್ಳುಗಾರರು. ಯಾಕಂದ್ರೆ, ಸತ್ಯಹರಿಶ್ಚಂದ್ರ ಕಾಡಿಗೆ ಹೋಗುವಾಗ ಸಿದ್ದರಾಮನ ಹುಂಡಿಯ ಇವರ ಮನೆಯ ಹಿತ್ತಲಲ್ಲೇ ಹೋಗಿರೋದು. ಅವರನ್ನೇ ಫಾಲೋ ಮಾಡಿರೋ ಸಿಎಂ ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರಾಗಿದ್ದಾರೆ. ನಾವೆಲ್ಲಾ ಸುಳ್ಳುಗಾರರಾಗಿದ್ದೇವೆಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಮಾತಿನ ಬಗ್ಗೆ ಮೇಲೆ ನಿಗಾ ಇಟ್ಕೊಂಡು ಮಾತನಾಡಬೇಕು. ನಾನು ಏನ್ ಸುಳ್ಳು ಹೇಳಿದ್ದೇನೆ ಅನ್ನೋದನ್ನ ಜನತೆ ಮುಂದಿಡಬೇಕು, ಸುಳ್ ಹೇಳ್ಕೊಂಡು ರಾಜ್ಯದ ಜನತೆಗೆ ಮೋಸ-ದ್ರೋಹ ಮಾಡ್ಕೊಂಡು, ಅಕ್ರಮ ಹಣ ಸಂಪಾದನೆ ಮಾಡಿರೋದು ಸಿದ್ದರಾಮಯ್ಯ. ನಾನಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.

ದೇವೇಗೌಡ ನನ್ನನ್ನ ಬೆಳೆಸಿದ್ನಾ, ನಾವೆಲ್ಲಾ ಪಕ್ಷ ಕಟ್ಟಿದ್ದಕ್ಕೆ ಇವ್ರು ಅಧಿಕಾರಕ್ಕೆ ಬಂದದ್ದು, ನನ್ನನ್ನ ಕಾವಲು ಸಮಿತಿಯ ಅಧ್ಯಕ್ಷ ಹಾಗೂ ಸಚಿವನನ್ನಾಗಿ ಮಾಡಿದ್ದು ರಾಮಕೃಷ್ಣ ಹೆಗಡೆ ಎಂಬ ಸಿಎಂ ಹೇಳಿಕೆಗೂ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ, ದೇವೇಗೌಡರ ಶಕ್ತಿ ಏನು ಅನ್ನೋದ್ನ ಮೇ 15 ತಾರೀಖು ರಾಜ್ಯದ ಜನ ತೋರಿಸ್ತಾರೆ. ಆವತ್ತು ದೇವೇಗೌಡರು ಸಿದ್ದರಾಮಯ್ಯನಿಗೆ ಏನ್ ಕಾಂಟ್ರಿಬ್ಯೂಷನ್ ಕೊಟ್ರು ಅನ್ನೋದ್ನ ಸಿಂಧ್ಯಾ ಇನ್ನು ಬದುಕಿದ್ದಾರಲ್ಲ ಅವರನ್ನ ಕೇಳಿ ಅಥವಾ ಸಿಂಧ್ಯಾ ಬಿಟ್ಟು ಬೇರೆ ಯಾರಾದ್ರೂ ಬದುಕಿದ್ರು ಅವರನ್ನೂ ಕೇಳಿ ಎಂದು ಸಿಎಂ ಹೇಳಿಕೆಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ವೋಟ್ ಗಿಮಿಕ್​

ಶಿವಮೊಗ್ಗದಲ್ಲಿ ಮಾತನಾಡಿದ ಕುಮಾರಸ್ವಾಮಿ, ಇಷ್ಟು ದಿನ ಸುಮ್ಮನಿದ್ದ ಪ್ರಧಾನಿ ಮೋದಿ ಈಗ ಮಹದಾಯಿ ವಿಚಾರವಾಗಿ ಮಾತನಾಡಿದ್ದಾರೆ. ಇದೆಲ್ಲ ಕರ್ನಾಟಕ ಜನತೆಯ ಓಟ್ ಪಡೆಯುವ ಗಿಮಿಕ್ ಎಂಂದಿದ್ದಾರೆ.

ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯದ ಜನರಿಗೆ ನ್ಯಾಯ ಕೊಡಬಹುದಿತ್ತು. ಈಗಾಗಲೇ ಮಹದಾಯಿ ಟ್ರಿಬ್ಯುನಲ್ ನಲ್ಲಿ ತೀರ್ಮಾನವಾಗಿ ಅಂತಿಮ ಹಂತಕ್ಕೆ ಬಂದಿದೆ. ಆದ್ರೆ ನರೇಂದ್ರ ಮೋದಿಯವರು ಈಗ ಮಹದಾಯಿ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ರಾಜ್ಯದ ಜನರ ಮತ ಪಡೆಯಲು ಗಮಿಕ್ ಮಾಡುತ್ತಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ರನ್ನು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಹೆಚ್ಡಿಕೆ, ನಾನು ಯಾವ ಸ್ಟಾರ್ ಗಳನ್ನು ಕ್ಯಾಂಪೇನ್ ಗೆ ಬನ್ನಿ ಎಂದು ಕೇಳಿಲ್ಲ. ಕೆಲ ಹಿಂದೆ ಸುದೀಪ್ ರವರು ನನ್ನನ್ನು ಭೇಟಿ ಮಾಡಿದ್ದರು. ಚಿತ್ರರಂಗದಲ್ಲಿ ಸುದೀಪ್ ರವರು ಬೆಳೆಯಬೇಕು. ನಾನು ರಾಜಕೀಯಕ್ಕೆ ಬನ್ನಿ ಎಂದು ಅವರನ್ನು ಕೇಳಲಿಲ್ಲ. ಸ್ಟಾರ್ ನಟರನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿಸಿ ಮತಪಡೆಯುವ ಭಾವನೆ ಇಲ್ಲ. ಸಿನಿಮಾ ನಟರು ಯಾವುದಾದರೂ ಒಂದು ಪಕ್ಷದ ಪರ ಇರಬೇಕು, ಜನರು ನಿಮ್ಮ ಬಗ್ಗೆ ಬೇರೆ ರೀತಿ ಮಾತನಾಡುವಂತೆ ಮಾಡಿಕೊಳ್ಳಬೇಡಿ ಎಂದು ಸ್ಟಾರ್ ಗಳಿಗೆ ಸಲಹೆ ನೀಡಿದ್ದಾರೆ ಹೆಚ್.ಡಿ.ಕುಮಾರಸ್ವಾಮಿ.

Next Story

RELATED STORIES