Top

ಸಿಂಧಗಿ ಕ್ಷೇತ್ರದ ಶಾಸಕ, ಬಿಜೆಪಿ ಅಭ್ಯರ್ಥಿ ಬಂಧನ, ಬಿಡುಗಡೆ

ಮತಪತ್ರದಲ್ಲಿ ಉದ್ದೇಶಪೂರ್ವಕವಾಗಿ ಜೆಡಿಎಸ್​ ಅಭ್ಯರ್ಥಿಯ ಕ್ರಮಸಂಖ್ಯೆ ಅದಲು-ಬದಲು ಮಾಡಿದ ಆರೋಪದ ಮೇಲೆ ಸಿಂಧಗಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ್​ ಭೂಸನೂರ ಅವರನ್ನು ಬಂಧಿಸಿ ನಂತರ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಮಾದರಿ ಮತಪತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಕ್ರಮಸಂಖ್ಯೆ ಅದಲು ಬದಲು ಮಾಡಿದ್ದ ಬಿಜೆಪಿ ಅಭ್ಯರ್ಥಿ ರಮೇಶ್​, ಬಿಜೆಪಿ ತಯಾರಿಸಿದ ಮಾದರಿ ಮತಪತ್ರದಲ್ಲಿ ಉದ್ದೇಶಪೂರ್ವಕವಾಗಿ ಕ್ರಮಸಂಖ್ಯೆ ಅದಲು ಬದಲು ಮಾಡಿದ್ದರು. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಅಭ್ಯರ್ಥಿ ಎಂ ಸಿ ಮನಗೂಳಿ ದೂರು ನೀಡಿದ್ದರು.

ಚುನಾವಣಾ ಅಧಿಕಾರಿಗಳಿಗೆ ನಿನ್ನೆ ರಾತ್ರಿ ದೂರು ನೀಡಲಾಗಿತ್ತು. ದೂರಿನ ಅನ್ವಯ ಸಿಂದಗಿ ಠಾಣೆ ಪೊಲೀಸರಿಂದ ಅಭ್ಯರ್ಥಿ ರಮೇಶ ಭೂಸನೂರ ಅವರ ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.

Next Story

RELATED STORIES