Top

ಸಚಿವ ಆಂಜನೇಯ ಚೇತರಿಕೆ

ದಾವಣಗೆರೆ: ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದಿದ್ದ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಶುಗರ್ ಮಟ್ಟ ಕಡಿಮೆಯಾಗಿದ್ದರಿಂದ ನಿಶ್ಯಕ್ತರಾಗಿದ್ದರು. ದಾವಣಗೆರೆಯ ಖಾಸಗೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡಿದೆ.

ಇದೇ ವೇಳೆ ಮಾತನಾಡಿದ ಆಂಜನೇಯ, ಒಂದು ತಿಂಗಳಿನಿಂದ ಬಿರು ಬಿಸಿಲಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ. ಹಾಗಾಗಿ ಸುಸ್ತಾಗಿ ಬಿದ್ದಿದ್ದೆ, ಮತ್ತೆ ಇಂದಿನಿಂದ ಚುನಾವಣಾ ಪ್ರಚಾರ ಮಾಡುತ್ತೇನೆ. ಬಿಜೆಪಿಯವರು ಇದನ್ನೇ ಬಂಡವಾಳ ಮಾಡಿಕೊಂಡು ವಿನಾಃ ಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲಸ ಮಾಡಿಲ್ಲಾ ಎಂದು ಜನರು ಛೀಮಾರಿ ಹಾಕಿದ್ದರಿಂದ ನಾನು ಕುಸಿದು ಬಿದ್ದೆ ಎಂದು ಹಬ್ಬಿಸುತ್ತಿದ್ದಾರೆ.ಆದ್ರೆ ಇದೆಲ್ಲ ಸುಳ್ಳು, ನಾನು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮತ್ತೆ ಜನರ ಬಳಿ ಹೋಗುತ್ತಿದ್ದೇನೆ. ಜನ ಮತ್ತೆ ನನಗೆ ಆಶೀರ್ವಾದ ಮಾಡುತ್ತಾರೆ ಎಂದಿದ್ದಾರೆ.

Next Story

RELATED STORIES