Top

ವಂಚಕ ಹೂಡಿಕೆದಾರನಿಂದ ಸಿದ್ದರಾಮಯ್ಯಗೆ ಉಡುಗೊರೆ: ಬಿಜೆಪಿ ಗಂಭೀರ ಆರೋಪ

ವಂಚಕ ಹೂಡಿಕೆದಾರನಿಂದ ಸಿದ್ದರಾಮಯ್ಯಗೆ ಉಡುಗೊರೆ: ಬಿಜೆಪಿ ಗಂಭೀರ ಆರೋಪ
X

ಮಲೇಷ್ಯಾದಲ್ಲಿ ಹೂಡಿಕೆದಾರನಾಗಿರುವ ಚೆನ್ನೈ ಮೂಲದ ಉದ್ಯಮಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪರ್ಕ ಹೊಂದಿದ್ದು, ಚೀನಾಗೆ ಭೇಟಿ ನೀಡಿದ ವೇಳೆ ಉಡುಗೊರೆ ಪಡೆದಿದ್ದರು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ಉದ್ಯಮಿ ಈಶ್ವರನ್ ಅವರನ್ನು ಚೀನಾದಲ್ಲಿ ಭೇಟಿ ಮಾಡಿದ ಸಿದ್ದರಾಮಯ್ಯ ಉಡುಗೊರೆಯ ಬಾಕ್ಸ್​ ಪಡೆಯುತ್ತಿರುವ ಚಿತ್ರವನ್ನು ಬಿಡುಗಡೆ ಮಾಡಿದರು.

ಯಾವ ಉಡುಗೊರೆ ಪಡೆದಿದ್ದರು ಎಂಬುದನ್ನು ಸಿದ್ದರಾಮಯ್ಯ ಅವರೇ ಹೇಳಬೇಕು. ಇದು ಈ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ದುಬಾರಿ ವಾಚ್​ ಆಗಿರಬಹುದು ಎಂದು ಸಂಬಿತ್​ ಪಾತ್ರ ಹೇಳಿದರು.

ಸಿಎಂ ಸಿದ್ದರಾಮಯ್ಯ ಕಳೆದ ಐದು ವರ್ಷಗಳಿಂದ ಇಲ್ಲೀಗಲ್ ಬ್ಯುಸಿನೆಸ್ ಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ಮಲೇಶಿಯಾದಲ್ಲಿರುವ ತಮಿಳು ಉದ್ಯಮಿ ವಿಜಯ್ ಈಶ್ವರನ್ ವಿರುದ್ಧ ದೇಶಾದ್ಯಂತ ನೂರಕ್ಕೂ ಹೆಚ್ಚು ಎಫ್ ಐಆರ್ ದಾಖಲಾಗಿವೆ. ಚೆನ್ನೈ ಮತ್ತು ಮುಂಬೈಯಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದ ವಿಜಯ್ ಈಶ್ವರನ್, ಎಸ್ ಎಫ್ ಐ ಯಿಂದ ರಾಷ್ಟ್ರೀಯ ಭಧ್ರತೆಗೆ ಬೆದರಿಕೆ ಎಂದು ಘೋಷಿಸಲ್ಪಟ್ಟಿದ್ದ ಎಂಎಲ್ಎಂ ಉದ್ಯಮಿ ಆಗಿದ್ದಾರೆ.

2009ರಿಂದ ಪರಾರಿಯಾಗಿರುವ ವಿಜಯ್ ಈಶ್ವರನ್, ಮಲೇಷ್ಯಾದಲ್ಲಿ ತಂಗಿದ್ದಾರೆ. ಈಶ್ವರನ್ ಅವರನ್ನು ಸಿದ್ದರಾಮಯ್ಯ ಆಗಸ್ಟ್ 13, 2013ರಂದು ಚೀನಾಕ್ಕೆ ತೆರಳಿದ್ದ ವೇಳೆ ಭೇಟಿ ಮಾಡಿದ್ದಾರೆ. ಕ್ಯೂ ಐ ಕಂಪನಿ ಹೊಂದಿದ್ದ ವಿಜಯ್ ಈಶ್ವರನ್, ಅವರನ್ನು ಗ್ಲೋಬಲ್ ಇನ್ ವೆಸ್ಟರ್ಸ್ ಮೀಟ್ ನಲ್ಲಿ ಪಾಲ್ಗೊಳ್ಳುವಂತೆ ಸಿದ್ದರಾಮಯ್ಯ ಆಹ್ವಾನ ನೀಡಿದ್ದರು ಎಂದು ಸಂಬಿತ್ ಪಾತ್ರ ಆರೋಪಿಸಿದ್ದಾರೆ.

Next Story

RELATED STORIES