Top

ರಾತ್ರಿ 3.30ರವರೆಗೂ ವಿಚಾರಣೆ ನಡೆಸಿದ ನ್ಯಾಯಮೂರ್ತಿ!

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಶಾರೂಖ್ ಕಥಾವಾಲಾ ಸತತ 10 ಗಂಟೆಗಳ ವಿಚಾರಣೆ ನಡೆಸಿದ್ದು ಅಲ್ಲದೇ ಮುಂಜಾನೆ 3.30ರವರೆಗೂ ವಿಚಾರಣೆ ನಡೆಸಿ ದಾಖಲೆ ಬರೆದಿದ್ದಾರೆ.

ಬೇಸಿಗೆ ಕಾಲದ ರಜೆ ಆರಂಭದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ವಿಚಾರಣೆಗೆ 134 ಪ್ರಕರಣಗಳು ಇದ್ದವು. ಇದರಲ್ಲಿ 122 ಪ್ರಕರಣ ವಿಚಾರಣೆ ಅತ್ಯಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಮಯವನ್ನೂ ನೋಡದೇ ಎಲ್ಲಾ ಪ್ರಕರಣಗಳ ಕಕ್ಷಿದಾರರ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಶಾರೂಖ್ ಕಥಾವಾಲಾ ಹೊಸ ಸಾಧನೆ ಮಾಡಿದ್ದಾರೆ.

ಸಾಮಾನ್ಯವಾಗಿ ಕೋರ್ಟ್​ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರಗೂ ನಡೆಯುತ್ತದೆ. ಮಧ್ಯಾಹ್ನ 1 ಗಂಟೆ ಭೋಜನ ವಿರಾಮ ಇರುತ್ತದೆ. ಆದರೆ ನ್ಯಾಯಮೂರ್ತಿ ಶಾರೂಕ್ ಭೋಜನ ವಿರಾಮದ ನಂತರ ಸತತ 10 ಗಂಟೆಗಳ ಕಾಲ ಕೂತು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಮುಂಜಾನೆ 3.30ಕ್ಕೆ ಮುಂಬೈನಿಂದ ವಿಮಾನದಲ್ಲಿ ತೆರಳಬೇಕಿದ್ದು, ವಿಚಾರಣೆ ಪೂರೈಸಿದ್ದೂ ಅಲ್ಲದೇ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣ ತಲುಪಿದ್ದಾರೆ.

Next Story

RELATED STORIES