Top

ಮೋದಿ, ಅಮಿತ್ ಷಾ ವಿರುದ್ಧ ಟಿ.ಬಿ.ಜಯಚಂದ್ರ ವಾಗ್ದಾಳಿ

ತುಮಕೂರು: ನಾನು ಹಾಗೂ ಸಿದ್ದರಾಮಯ್ಯ ಇರೋವರೆಗೂ ಒಂದು ರೋಮನೂ ಕಿತ್ತುಕೊಳ್ಳೊಕಾಗಲ್ಲ ಅಂತಾ ಮೋದಿ ಹಾಗೂ‌ ಅಮಿತ್ ಷಾ‌ ವಿರುದ್ದ ಸಚಿವ ಟಿ.ಬಿ.ಜಯಚಂದ್ರ ಹರಿಹಾಯ್ದಿದ್ದಾರೆ..ಶಿರಾ ಕ್ಷೇತ್ರದ ಚಿಕ್ಕಬಾಣಗೆರೆಯಲ್ಲಿ ತಮ್ಮ ಪ್ರಚಾರದ ವೇಳೆ ಮಾತನಾಡಿದ ಜಯಚಂದ್ರ, ಈ ಜೋಡಿ ಏನೇ ಮಾಡಿದ್ರು ನಮ್ಮ ರೋಮಾನೂ ಅಲುಗಾಡಿಸಲು ಆಗಲ್ಲ, ನಾನು ಹಾಗೂ ಸಿದ್ದರಾಮಯ್ಯ ಇರೋವರೆಗೂ ಒಂದು ರೋಮನೂ ಕಿತ್ತುಕೊಳ್ಳೊಕಾಗಲ್ಲ ಅಂತಾ ವಾಗ್ದಾಳಿ ನಡೆಸಿದ್ದಾರೆ.‌.ಹಗಲಿನಲ್ಲೂ ಬ್ಯಾಟರಿ ಹಾಕಿ ನಮ್ಮ ತಪ್ಪು ಹುಡುಕ್ತಾ ಇದ್ದಾರೆ, ಆದರೆ ಅವರಿಗೆ ನಮ್ಮಯಾವ ತಪ್ಪು ಸಿಗುತ್ತಿಲ್ಲ. ಭ್ರಷ್ಟಾಚಾರ ಮುಕ್ತ ಸರ್ಕಾರ ನಮ್ಮದು ಅಂತಾ ಹೇಳಿದ್ದಾರೆ..ಜನ ಸೇವೆಯೇ ಜನಾರ್ದನ ಸೇವೆ‌ ಅಂದುಕೊಂಡವರು‌ ನಾವು,ಹಾಗಾಗಿ ಜನರು ನಮಗೆ‌‌‌ ಆಶೀರ್ವಾದ ಮಾಡ್ತಾರೆ, ಮೋದಿ, ಅಮಿತ್ ಷಾ ಸುಳ್ಳು ಮೋಡಿ‌ ನಡೆಯಲ್ಲಾ ಅಂತಾ ಲೇವಡಿ ಮಾಡಿದ್ಧಾರೆ.

Next Story

RELATED STORIES